

ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಸಹಯೋಗದಲ್ಲಿ 15 ವರ್ಷ ಮೇಲ್ಪಟ್ಟ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಅನುಷ್ಠಾನಗೊ ಳಿಸುತ್ತಿರುವ ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಯಶಸ್ವಿಗೆ ಯೋಜನಾಬದ್ಧ ಕಾರ್ಯತಂತ್ರ ರೂಪಿಸುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ಸೂಚಿಸಿದರು.
ನವಭಾರತ ಸಾಕ್ಷರತಾ ಕಾರ್ಯಕ್ರಮ ಕುರಿತು, ಡಿಸಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಲ್ಲಿ ಮಾತನಾಡಿದ ಅವರು, ಅಂಡರ್‌ಸ್ಟಾೃಂಡಿಂಗ್ ಲೈಫ್‌ಲಾಂಗ್ ಲರ್ನಿಂಗ್ ಫಾರ್ ಆಲ್‌ಸೊಸೈಟೀಸ್(ಖಿಔಔಅಖ)ಅನರಕ್ಷರಸ್ಥರ ಸ ಮೀಕ್ಷೆ, ಬೋಧನೆ, ಕಲಿಕಾ ಸಾಮಗ್ರಿ ಹಂಚಿಕೆ, ಮೌಲ್ಯಮಾಪನ ಇತ್ಯಾದಿ ಚಟುವಟಿಕೆಗಳನ್ನು ರೂಪಿಸಲು ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ.
ಜಿಲ್ಲಾ ಹಂತದ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿ‘ಉಲ್ಲಾಸ್’ದಡಿ ಶೇ.100 ಸಾಕ್ಷರತೆ ಖಚಿತ ಪಡಿಸಿ ಕೊಳ್ಳಬೇಕಿದೆ. ಪದವಿ ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಸ್ವಯಂ ಸೇವಕ ಬೋಧಕರನ್ನಾಗಿ ನಿಯೋಜಿಸುವಂತೆ ಸೂಚಿಸಿದ ರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಪಿ.ಎನ್.ಮಂಜುಳಾ ಮಾತನಾಡಿ, ಈ ಯೋಜನೆಗೆ ಕೇಂದ್ರದಿಂದ ಶೇ.60 ಹಾಗೂ ರಾಜ್ಯದಿಂದ ಶೇ.40 ಅ ನುದಾನ ಬಿಡುಗಡೆಯಾಗಲಿದೆ ಎಂದರು.
ಜಿಲ್ಲೆಯ ಆಯ್ದ 27 ಗ್ರಾಪಂ ಅನಕ್ಷರಸ್ಥರ ಸರ್ವೆ ಪ್ರಗತಿಯಲ್ಲಿದೆ. ಈವರೆಗೆ ಜಿಲ್ಲೆಯಲ್ಲಿ 25,777 ಅನಕ್ಷರಸ್ಥರನ್ನು ಗುರುತಿಸಲಾಗಿದೆ. 2027ರೊಳಗಾಗಿ ರಾಜ್ಯದಲ್ಲಿ ಶೇ.100 ಸಾಕ್ಷರತೆ ಮಹತ್ವಾಕಾಂಕ್ಷೆ ಗುರಿ ಇದೆ ಎಂದರು. ಇದೇ ಸಂದರ್ಭದಲ್ಲಿ ನವಭಾರತ ಸಾಕ್ಷರತಾ ಕಾ ರ್ಯಕ್ರಮದ ಕುರಿತ ಭಿತ್ತಿಪತ್ರವನ್ನು ಡಿಸಿ ಬಿಡುಗಡೆ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್‌ಹೆಬ್ಬಳ್ಳಿ, ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂಸಾಬ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್,ಡಿಡಿಪಿಐ ಕೆ.ರವಿಶಂಕರರೆಡ್ಡಿ,ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಮತ್ತಿತರರು ಇದ್ದರು.