ಹುಬ್ಬಳ್ಳಿಯ ನವನಗರದ ರಾಘವೇಂದ್ರ ಭಕ್ತ ಮಂಡಳಿ ಆಶ್ರಯದಲ್ಲಿ ಭಾನುವಾರ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ಉತ್ತರಾರಾಧನೆ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ರಥಾಂಗ ಹೋಮ ನಂತರ ಭಕ್ತರು ರಥೋತ್ಸವ ನೆರವೇರಿಸಿದರು.