ನವದುರ್ಗಾ ಪರಮೇಶ್ವರಿ ಜಾತ್ರೆಗೆ ಚಾಲನೆ

24spt6
Published on

ಸೋಮವಾರಪೇಟೆ : ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಕಿರಣ್ ಅವರು ದೇವಿಗೆ ಆರತಿ ಬೆಳಗುವ ಮೂಲಕ ಧಾರ್ಮಿಕ ವಿಧಿ, ವಿಧಾನ ಉದ್ಘಾಟಿಸಿದರು. ಜಾತ್ರೆ ಅಂಗವಾಗಿ ದೇವಾಲಯ ಆವರಣದಲ್ಲಿ ಪಶುಚಿಕಿತ್ಸಾ ಶಿಬಿರಕ್ಕೆ ಪಶು ವೈದ್ಯಾಧಿಕಾರಿ ಡಾ. ಸತೀಶ್ ಕುಮಾರ್ ಚಾಲನೆ ನೀಡಿದ್ದು ಗಮನ ಸೆಳೆಯಿತು.

ಇದೇ ಸಂದರ್ಭ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಮುಕ್ತ ಫುಟ್ಬಾಲ್ ಪಂದ್ಯಾಟವನ್ನು ದೇವಾಲಯ ಸಮಿತಿ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ, ಕ್ರೀಡಾಸಮಿತಿ ಅಧ್ಯಕ್ಷ ಎಸ್.ಬಿ.ಗುರುಪ್ರಸಾದ್ ಜಂಟಿಯಾಗಿ ಉದ್ಘಾಟಿಸಿದರು. ಪಂದ್ಯಾಟದಲ್ಲಿ ಟೀಮ್ ಶುಂಠಿ, ಹಾನಗಲ್ ಬಾಯ್ಸ, ಫಾರ್ಮರ್ಸ್‌ ಸ್ಪೋರ್ಟ್ಸ್ ಕ್ಲಬ್ ದೊಡ್ಡಮಳ್ತೆ, ಫ್ರೆಂಡ್ಸ್ ಎಫ್‌ಸಿ ಗೌಡಳ್ಳಿ, ನೀಲ್‌ಶಾಂತ್ ಬಾಯ್ಸ ಬೀಟಿಕಟ್ಟೆ, ಎಂಎಜಿ ಫ್ರೆಂಡ್ಸ್ ಗೌಡಳ್ಳಿ, ಪ್ಲಾಂಟರ್ಸ್‌ ಕ್ಲಬ್ ಬೀಟಿಕಟ್ಟೆ ತಂಡಗಳು ಭಾಗವಹಿಸಿದ್ದವು. ಕ್ರೀಡಾಸಮಿತಿ ಉಪಾಧ್ಯಕ್ಷ ಸುಮಂತ್ ಕೂಗೂರು, ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್, ಪ್ರಮುಖರಾದ ಗೌಡಳ್ಳಿ ಮಹೇಶ್, ರವಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net