ನಿವೃತ್ತಿ ಇರುವುದು ಉದ್ಯೋಗಕ್ಕೆ ಮಾತ್ರ

nrp send
ಎನ್.ಆರ್.ಪುರ ಬಸ್ತಿಮಠದ ಶಾಲೆಯಲ್ಲಿ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಶ್ಯಾಮಲಾ ರಾಜಕುಮಾರ್‌ಖಂಡೋಜಿ ಅವರನ್ನು ಸನ್ಮಾನಿಸಲಾಯಿತು. ನೇತ್ರಾವತಿ, ಕಮಲಾ, ದಾಕ್ಷಾಯಿಣಿಬಾಯಿ, ಪ್ರೇಮಕುಮಾರ್ ಇತರರಿದ್ದರು.
Published on

ಎನ್.ಆರ್.ಪುರ: ಉದ್ಯೋಗದಲ್ಲಿ ನಿವೃತ್ತಿಯಾದರೂ ಜೀವನದಲ್ಲಿ ನಿವೃತ್ತಿ ಎಂಬುದೇ ಇಲ್ಲ ಎಂದು ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ ತಿಳಿಸಿದರು. ಬಸ್ತಿಮಠ ಸರ್ಕಾರಿ ಶಾಲೆಯಲ್ಲಿ ಮುಂಡೊಳ್ಳಿ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಶ್ಯಾಮಲಾ ರಾಜಕುಮಾರ್ ಖಂಡೋಜಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಶ್ಯಾಮಲಾ ಅವರ ಸೇವೆ ಅನನ್ಯವಾದುದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ಯಾಮಲಾ, ಮುಂಡೊಳ್ಳಿ ಗ್ರಾಮದಲ್ಲಿ ಅಂಗನವಾಡಿ ತೆರೆಯುವಾಗ ಮನೆ ಮನೆ ಸರ್ವೇ ಮಾಡಲಾಗಿತ್ತು. ಪ್ರಾರಂಭದ 15 ದಿನ ಗಣಪತಿ ದೇವಸ್ಥಾನದಲ್ಲಿ ಅಂಗನವಾಡಿ ನಡೆಸಲಾಗಿತ್ತು. ಆಗಿನ ಕಾಲದಲ್ಲಿ ಕಷ್ಟಪಟ್ಟು ಅಂಗನವಾಡಿ ಕಟ್ಟಡ ಕಟ್ಟಿದ್ದೇವೆ. ಅಂಗನವಾಡಿ ಎಂಬುದು ಊರಿನ ಕಲಶವಿದ್ದಂತೆ ಎಂದರು.
ಯೋಗೀಶ್, ಶ್ರುತಿ, ನಾಗರಾಜ ದೊಡ್ಡಮನಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ದಾಕ್ಷಾಯಿಣಿಬಾಯಿ, ಬಸ್ತಿಮಠದ ಶಾಲೆ ಮುಖ್ಯಶಿಕ್ಷಕಿ ನೇತ್ರಾವತಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಕಮಲಾ, ನಾಗಲಾಪುರ ಗ್ರಾಪಂ ಸದಸ್ಯ ರಮೇಶ್ ದೊಡ್ಡಮನಿ, ಪ್ರೇಮಕುಮಾರ್, ಡಿ.ರಾಜಪ್ಪ, ನೇತ್ರಾವತಿ, ಡೈಸಿ ಭಾನುಮತಿ, ಕೆ.ಎಸ್.ರಾಜಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net