ನವ ತಂತ್ರಜ್ಞಾನದ ಕುತೂಹಲ ಇರಲಿ

0809KLb16
Published on

ಕಲಬುರಗಿ: ಇಂಜಿನೀಯರ್​ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನದ ಬಗ್ಗೆ ಕುತೂಹಲ ಮೂಡಿಸಿಕೊಂಡು, ಮುನ್ನಡಿ ಇಡಬೇಕು. ಹೊಸ ಸಂಶೋಧನೆ, ಸವಾಲುಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಡಾ.ಶುಭಾಂಗಿ ಡಿ.ಸಿ. ಹೇಳಿದರು.

ನಗರದ ಶೆಟ್ಟಿ ಇನ್​ಸ್ಟಿಟ್ಯೂಟ್​ ಆ್​ ಟೆಕ್ನಾಲಜಿ(ಎಸ್​ಐಟಿ) ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಥಮ ವರ್ಷದ ಇಂಜಿನೀಯರ್​ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಶಿಸ್ತು ಬದ್ಧ ಅಧ್ಯಯನದೊಂದಿಗೆ ಹೊಸ ಸಂಶೋಧನೆಗಳತ್ತ ಒಲವು ಮೂಡಿಸಬೇಕು. ಮಾನವೀಯ ಮೌಲ್ಯಗಳೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಹೈದರಾಬಾದ್​ನ ಓಡಿನ್​ ಶಾಲೆ ನಿರ್ದೇಶಕ ಶ್ರೀನಿವಾಸ ವೇದಾಂತ ಮಾತನಾಡಿ, ಕೌಶಲ ಆಧಾರಿತ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಸ್ಪರ್ಧಾತ್ಮಕ ವಿಶ್ವದಲ್ಲಿ ವಾಸ್ತವದ ಸಮಸ್ಯೆ, ಸವಾಲುಗಳನ್ನು ಎದುರಿಸಲು ಇಂಜಿನೀಯರ್​ ಓದು ನಡೆಯಲಿ ಎಂದು ಶುಭ ಹಾರೈಸಿದರು.

ಶೆಟ್ಟಿ ಸಂಸ್ಥೆಯ ಅನಿರುದ್ದ ಶೆಟ್ಟಿ, ಶ್ವೇತಾ ಶೆಟ್ಟಿ ಮಾತನಾಡಿ, ಎಸ್​ಐಟಿ ಸಂಸ್ಥೆಯಲ್ಲಿ ಎಲ್ಲ ಅತ್ಯಾಧುನಿಕ, ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಿ, ಶಿಕ್ಷಣ ಒದಗಿಸಲಾಗುತ್ತಿದೆ. ಕೌಶಲ, ಪ್ರಾಯೋಗಿಕ ಬೋಧನೆಗೆ ಆದ್ಯತೆ ನೀಡಿದ್ದು, ವಿದ್ಯಾರ್ಥಿಗಳು ಲಾಭ ಪಡೆದು, ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಡಾ.ಕೆ.ವಿ.ಜಯಕುಮಾರ, ಪ್ರಾಂಶು ಪಾಲ ಡಾ.ಪ್ರಭು ರಾಕರಡ್ಡಿ, ಪ್ರೊ.ವಂದನಾ, ಡಾ.ಪ್ರಶಾಂತ ಶಹಾಬಾದಕರ್​, ಡಾ.ಆಶಾಲತಾ ಡಾ.ಚಂದ್ರಕಲಾ ತೆಗನೂರ, ಪ್ರೀತಿ, ಡಾ.ಚಂದ್ರಕಲಾ ಪಾಟೀಲ್​, ಪ್ರೊ.ವಂದನಾ ಸೂರ್ಯವಂಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net