ನಲ್ಲೂರು ಸೋಮೇಶ್ವರ್ ಗೆಲುವು

IMG-20250328-WA0060
Published on

ಚಾಮರಾಜನಗರ: ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಡೆದ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಲ್ಲೂರು ಸೋಮೇಶ್ವರ 336 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಶಿವಕುಮಾರ್ 78 ಮತಗಳನ್ನು ಪಡೆದು ಪರಾಭವಗೊಂಡರು.

ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿಕ್ಕಿಮಾಧವರಾವ್ 106 ಮತಗಳನ್ನು ಪಡೆದು ಜಯಶಾಲಿಯಾಗಿದ್ದು, ಪ್ರತಿ ಸ್ಪರ್ಧಿಗಳಾದ ಶ್ರೀನಾಥ್ 32 ಮತ ಹಾಗೂ ಮೈಕಲ್ ಟ್ರಿಬ್ಯೂಷಿಯಸ್ 20 ಮತ ಪಡೆಯುವ ಮೂಲಕ ಪರಾಭವಗೊಂಡರು.

ಒಟ್ಟು ಹನ್ನೆರಡು ಕ್ಷೇತ್ರಗಳ ನಿರ್ದೇಶಕ ಸ್ಥಾನಗಳಿಗೆ 10 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net