ನಲ್ಲಿಯ ಮೀಟರ್‌ಗಳ ಕಳವು

20-kollegal-2,,,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.49481517, 0.6268229);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 39;
Published on

ಕೊಳ್ಳೇಗಾಲ: ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆ ಮಾಡುವ 24*7 ಕುಡಿಯುವ ನೀರಿನ ಯೋಜನೆಯಲ್ಲಿ ಅಳವಡಿಸಲಾಗಿರುವ ನಲ್ಲಿಯ ಮೀಟರ್‌ಗಳು ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಕಳವಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ.

2023 ಸೆಪ್ಟೆಂಬರ್ ತಿಂಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ 24*7 ಕುಡಿಯುವ ನೀರಿನ ಯೋಜನೆ ಜನ ಸಾಮಾನ್ಯರಿಗೆ ಸೇವೆ ನೀಡುತ್ತಿದೆ. ಆದರೆ, ನಲ್ಲಿಗಳಿಗೆ ಅಳವಡಿಸುವ ಮೀಟರ್‌ಗಳನ್ನು ದುಷ್ಕರ್ಮಿಗಳು ಕಳವು ಮಾಡುತ್ತಿರುವುದು ಬೆಳಕಿಗೆ ಬಂದಿದೆ.ಪಟ್ಟಣದ ದಕ್ಷಿಣ ಬಡಾವಣೆಯ ಗಣೇಶ್ ಅವರ ಮನೆಯ ಪಕ್ಕದ ಖಾಲಿ ನಿವೇಶನದಲ್ಲಿ ಅಳವಡಿಸಲಾಗಿದ್ದ ಕುಡಿಯುವ ನೀರಿನ ಮೀಟರ್ ಅನ್ನು ಕಿಡಿಗೇಡಿಗಳು ಕಳವು ಮಾಡಿದ್ದಾರೆ. ಗೀತಾ ಪ್ರೈಮರಿ ಶಾಲೆಯ ಮುಂಭಾಗದ ಜಯಲಕ್ಷ್ಮೀ ಎಂಬುವರ ಮನೆಯ ಮುಂಭಾಗವಿದ್ದ ನೀರಿನ ಪೈಪ್ ಕತ್ತರಿಸಿ ಮೀಟರ್ ಕದ್ದೊಯ್ದಿದ್ದಾರೆ. 3ನೇ ವಾರ್ಡ್‌ನ ಭೀಮನಗರದ ಹೊಸಕೇರಿ ಬೀದಿಯ ಪ್ರತಾಪ್ ಎಂಬುವರ ಮನೆಯ ಮುಂಭಾಗವಿದ್ದ ನೀರಿನ ಮೀಟರ್ ಕಳವಾಗಿದೆ. ಈ ಬಗ್ಗೆ ನಿವಾಸಿಗಳು ವಾರ್ಡ್ ಸದಸ್ಯರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಯೋಜನೆಯ ನಿರ್ವಹಣೆಯ ಜವಾಬ್ದಾರಿ ಹೊತ್ತ 24*7 ಕುಡಿಯುವ ನೀರಿನ ಯೋಜನೆ ಅಧಿಕಾರಿಗಳಾಗಲಿ, ನಗರಸಭೆಯಾಗಲಿ ಯಾವುದೇ ಕ್ರಮವಹಿಸುತ್ತಿಲ್ಲ.

ಖಾಲಿ ನಿವೇಶನಗಳೇ ಟಾರ್ಗೆಟ್

ನಗರಸಭೆ ವ್ಯಾಪ್ತಿಗೆ ಬರುವ 31ವಾರ್ಡ್‌ಗಳಲ್ಲಿ ಸುಮಾರು 16 ಸಾವಿರ ಕುಡಿಯುವ ನೀರಿನ ನಲ್ಲಿಗಳ ಸಂಪರ್ಕವನ್ನು ನೀಡಲಾಗಿದೆ. ಕೆಲವು ಕಡೆಗಳಲ್ಲಿ ಸಂಪರ್ಕ ಕಲ್ಪಿಸಲು ಬಾಕಿ ಇದೆ. ಖಾಲಿ ನಿವೇಶನಗಳಲ್ಲಿ ವ್ಯರ್ಥವಾಗಿ ಸಂಪರ್ಕ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಆದರೀಗ ಕಿಡಿಗೇಡಿಗಳು ವಾಸವಿರುವ ಮನೆಗಳಲ್ಲದೆ ಹೆಚ್ಚಾಗಿ ಖಾಲಿ ನಿವೇಶನಗಳು ಹಾಗೂ ವಾಸವಿಲ್ಲದ ಮನೆಗಳ ನಲ್ಲಿಗಳ ಮೀಟರ್ ಕದಿಯಲು ಮುಂದಾಗಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಪರಿಶೀಲಿಸಿ ಕ್ರಮವಹಿಸಬೇಕಾಗಿದೆ.

ಕಳವಿನ ಬಗ್ಗೆ ದೂರು ದಾಖಲಾಗಿಲ್ಲ ಖಾಲಿ ನಿವೇಶನಗಳಲ್ಲಿ ಅಳವಡಿಸಿರುವ ನಲ್ಲಿಗಳ ಮೀಟರ್ ಕಳ್ಳರ ಕೈಗೆ ಸಲಿಸಾಗಿ ದೊರಕುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ನಗರಸಭೆ ಸದಸ್ಯರು 24*7 ಕುಡಿಯುವ ನೀರಿನ ಯೋಜನೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮವಾಗಿಲ್ಲ. ಕಳವಾಗಿರುವ ಬಗ್ಗೆ 24*7 ಕುಡಿಯುವ ನೀರಿನ ಯೋಜನೆಯ ಇಂಜಿನಿಯರ್ ರಾಜೇಶ್ ನಗರಸಭೆ ಆಯುಕ್ತರಿಗೆ ಮಾಹಿತಿ ನೀಡಿದ್ದೇನೆ. ನಗರಸಭೆಯಿಂದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಕೋರಿದ್ದೇವೆ. ಸುಮಾರು 100 ಮೀಟರ್ ಕಳವಾಗಿರಬಹುದು ಎಂದು ಅಂದಾಜಿಸಲಾಗಿದೆ ಎನ್ನುತ್ತಾರೆ. ಆದರೆ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರಿಲ್ಲ.

ನಲ್ಲಿಗಳ ಮೀಟರ್ ಕಳವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಖಾಲಿ ನಿವೇಶನಗಳಲ್ಲಿ ಹಾಕಲಾಗಿರುವ ಮೀಟರ್‌ಗಳು ಕಳವು ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿ ಎಂದು ನಗರಸಭೆ ಆಯುಕ್ತರಿಗೂ ತಿಳಿಸಿದ್ದೇವೆ. ಮೀಟರ್ ಕಳವಾಗಿದ್ದರೆ ಆ ಮನೆಯವರು ನಗರಸಭೆಗೆ ಅರ್ಜಿ ನೀಡಬೇಕು. ನಂತರ, ಮೀಟರ್ ಹಣ ಕಟ್ಟಿಸಿಕೊಂಡು ಹೊಸ ಮೀಟರ್ ಹಾಕಿ ಕೊಡಲು ಕ್ರಮ ವಹಿಸುತ್ತೇವೆ. ರಾಜೇಶ್ ಸೈಟ್ ಇಂಜಿನಿಯರ್ 24*7 ಕುಡಿಯುವ ನೀರಿನ ಯೋಜನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net