ನಲ್ಲಿ ಸಂಪರ್ಕಕ್ಕೆ 10,800 ನಿಗದಿ

ctd 25 mla
Published on

ಚಿತ್ರದುರ್ಗ: ಸೂಕ್ತ ಶುಲ್ಕ ಪಾವತಿಸುವ ಮೂಲಕ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಪಡೆಯುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಾಗರಿಕರಿಗೆ ಮನವಿ ಮಾಡಿದರು.

ನಗರದ ಜೋಗಿಮಟ್ಟಿ ರಸ್ತೆ ತಿಪ್ಪಿನಘಟ್ಟಮ್ಮ ದೇವಾಲಯ ಬಳಿ ಸೋಮವಾರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಟೀಚರ್ ಕಾಲನಿ ಬಳಿಯ ಓವರ್ ಟ್ಯಾಂಕ್ ಮೂಲಕ ಜೋಗಿಮಟ್ಟಿ ರಸ್ತೆ ಮನೆಗಳಿಗೆ ನೀರಿನ ಸಂಪರ್ಕವಿದೆ ಎಂದರು.

ತಿಪ್ಪಿನಘಟ್ಟಮ್ಮ ದೇವಾಲಯದ ಅಕ್ಕ-ಪಕ್ಕದ ಮನೆಗಳಿಗೆ ನೀರಿನ ಸಂಪರ್ಕವಿರಲಿಲ್ಲ. ಇಲ್ಲಿಯ ನಿವಾಸಿಗಳಿಗೆ ಮನವಿಗೆ ಸ್ಪಂದಿಸಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಪ್ರತಿ ಮನೆಗೆ 10,800 ರೂ. ಶುಲ್ಕವನ್ನು ನಲ್ಲಿ ಸಂಪರ್ಕಕ್ಕೆ ಪಾವತಿಸಬೇಕು ಎಂದು ಹೇಳಿದರು.

ಹಕ್ಕುಪತ್ರ, ಖಾತೆ ಇಲ್ಲದ ಆಸ್ತಿ ಮಾಲೀಕರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ಕೊಡಿಸುವ ಭರವಸೆ ನೀಡಿದರು.
ನಗರಸಭೆ ಸದಸ್ಯರಾದ ನಾಗರತ್ನಮ್ಮ, ಶ್ರೀನಿವಾಸ್, ಮಾಜಿ ಸದಸ್ಯ ಮಹೇಶ್, ಇಂಜಿನಿಯರ್‌ಗಳಾದ ಕಿರಣ್, ಮನೋಹರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net