

ಅದಮ್ಯ ರಂಗಶಾಲೆ ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ‘ನಲಿಯಿತು ನವಿಲು’ ಮಕ್ಕಳ ನಾಟಕ ಪ್ರದರ್ಶನವನ್ನು ನ.1ಸಂಜೆ ಸಂಜೆ 6 ಗಂಟೆಗೆ ನಗರದ ಕಿರು ರಂಗಮಂದಿರದಲ್ಲಿ ನಡೆಯಲಿದೆ ಆಯೋಜಿಸಲಾಗಿದೆ ಎಂದು ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.
ದೇವರಾಜ ಉಪವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಶಾಂತಮಲ್ಲಪ್ಪ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಧ್ಯಕ್ಷತೆ ವಹಿಸುವರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡುವರು. ಮುಖ್ಯ ಅತಿಥಿಯಾಗಿ ಜಯನಗರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಸಿ.ಜಿ.ಮೂರ್ತಿರಾವ್ ಭಾಗವಹಿಸುವರು.
ಗ.ಸು. ಭಟ್ಟ ರಚನೆಯ ‘ನಲಿಯಿತು ನವಿಲು’ ನಾಟಕವನ್ನು ವಿನೋದ ಸಿ. ಮೈಸೂರು ನಿರ್ದೇಶನ ಮಾಡಿದ್ದಾರೆ. ಬೆಳಕು ಮನೋಜ್ ಅದಮ್ಯ ಅವರದ್ದು. ಲೋಕನಾಥ್ ಸೋಗುಂ ಅವರ ಸಂಗೀತ ಸಂಯೋಜನೆಯಿದೆ. ಈ ನಾಟಕದ ಪ್ರೋತ್ಸಾಹ ಧನ ನೂರು ರೂಪಾಯಿ ಇದೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.