

ವಿಜಯವಾಣಿ ವಿಶೇಷ ಲಾಡಮುಗಳಿ
2-3 ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಜನ-ಜೀವನ ಅಸ್ತವ್ಯಸ್ತಗೊಂಡಿತ್ತು, ಮನೆ- ರಸ್ತೆಗಳು ಹಾಳಾಗಿದ್ದವು. ಆದರೆ ಇಲ್ಲಿವರೆಗೂ ಹಾಳಾದ ರಸ್ತೆಯ ದುರಸ್ತಿ ಕಾರ್ಯ ನಡೆದಿಲ್ಲ.
ಹೌದು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕಮಲಾನಗರದಿಂದ ನರೋಣಾ ತಾಂಡಾ ಕ್ರಾಸ್ವರೆಗಿನ 4 ಕಿಮೀ. ರಸ್ತೆಯ ಸ್ಥಿತಿಯಾಗಿದೆ. ಕೆಲ ವರ್ಷಗಳ ಹಿಂದೆ ಉತ್ತಮ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಸೆಪ್ಟೆಂಬರ್ನಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆ ಹಾಳಾಗಿದ್ದು, ರೋಡ್ ಎರಡು ಬದಿಯಲ್ಲಿ ಬೃಹತ್ ಆಕಾರದ ತೆಗ್ಗುಗಳು ಬಿದ್ದಿವೆ. ಅಧಿಕಾರಿಗಳು ಮಾತ್ರ ತಮಗೇನೂ ಸಂಬಂಧವಿಲ್ಲ ಎಂಬಂತೆ ವತರ್ಿಸುತ್ತಿದ್ದಾರೆ.
ರಸ್ತೆಯ ಎರಡು ಪಕ್ಕದಲ್ಲಿ ದೊಡ್ಡ- ದೊಡ್ಡ ಗುಂಡಿಗಳು ಬಿದ್ದಿದ್ದು, ಆದರೆ ಇಲ್ಲಿವರೆಗೂ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸುವ ಕೆಲಸವೂ ನಡೆದಿಲ್ಲ. ವಾಹನ ಸವಾರರಿಗೆ ತಗ್ಗುಗಳು ಕಾಣಿಸದೆ ಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇನ್ನು ರಾತ್ರಿ ವೇಳೆ ಸಂಚಾರವಂತೂ ಸಾವಿಗೆ ಆಹ್ವಾನ ನೀಡಿದಂತಾಗಿದೆ. ರಸ್ತೆ ದುರಸ್ತಿ ಮಾಡಿ ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಮೌಖಿಕವಾಗಿ ಮನವಿ ಸಲ್ಲಿಸಿದ್ದಾರೆ, ಆದರೂ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆಯತ್ತ ಗಮನಹರಿಸಿ ಗುಣಮಟ್ಟದ ರಸ್ತೆ ನಿಮರ್ಾಣಕ್ಕೆ ಮುಂದಾಗಬೇಕಿದೆ ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
ಕಮಲಾನಗರ- ನರೋಣಾ ರಸ್ತೆಯಲ್ಲಿ ನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ. ನಿತ್ಯ ಯಾರಾದರೊಬ್ಬರು ರಸ್ತೆ ಬದಿಯಲ್ಲಿನ ತಗ್ಗುಗಳಲ್ಲಿ ಬಿದ್ದು ಗಾಯ ಮಾಡಿಕೊಳ್ಳುತ್ತಲೆ ಇರುತ್ತಾರೆ. ಕೂಡಲೇ ರಸ್ತೆ ದುರಸ್ತಿ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. | ಶಿವಯ್ಯ ಮಠಪತಿ, ನರೋಣಾ ಗ್ರಾಮಸ್ಥ
ಭೋದನ- ಕಮಲಾನಗರ ರಸ್ತೆಯ ಮಧ್ಯೆದಲ್ಲಿನ ಸುಮಾರು 300 ಮೀ. ಶೋಲ್ಡರ್ ಕಟ್ ಆಗಿದೆ. ಈ ಬಗ್ಗೆ ಜನರು ಗಮನಕ್ಕೆ ತಂದಿದ್ದಾರೆ. ನೆರೆಯಿಂದ ಹಾಳಾಗಿರುವ ಬಗ್ಗೆ ನಾವು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶೀಘ್ರದಲ್ಲಿ ದುರಸ್ತಿ ಕೆಲಸ ಆರಂಭಿಸಲಾಗುವುದು.
| ಪ್ರಕಾಶ ಚಾಳಿಕರ್, ಎಇ, ಪಿಡಬೂ್ಲೃಡಿ ಇಲಾಖೆ, ಆಳಂದ