ನರೇಗಾದಲ್ಲಿ ಕಾಯಕ ಬಂಧುಗಳ ಪಾತ್ರ ಮುಖ್ಯ

26 HBD 1
ಹುಮನಾಬಾದ ತಾಪಂ ಸಭಾಂಗಣದಲ್ಲಿ ಕಾಯಕ ಬಂಧುಗಳಿಗೆ ಬುಧವಾರ ಆಯೋಜಿಸಿದ್ದ ಒಂದು ದಿನದ ಪುನರಶ್ಚೇತನ ತರಬೇತಿಯನ್ನು ತಾಪಂ ಇಒ ದೀಪಿಕಾ ನಾಯ್ಕರ ಉದ್ಘಾಟಿಸಿ ಮಾತನಾಡಿದರು. ಸರಸ್ವತಿ ಕೆ., ಅಶೋಕ ಯರಗಟ್ಟಿ, ಕೆ.ಟಿ.ಮೀರಿಲ್, ಸುನೀತಾ, ಪ್ರಕಾಶ ಡೊಳ್ಳೆ, ಶಫಿವುದ್ದೀನ್ ಇತರರಿದ್ದರು.
Published on

ಹುಮನಾಬಾದ್: ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನಗೊಳಿಸಲು ಕಾಯಕ ಬಂಧುಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಸ್ವರಾಜ್ ಅಭಿಯಾನ- ಕರ್ನಾಟಕ, ನಾಗರಿಕ ಸಮಾಜ ಸೇವಾ ಸಂಸ್ಥೆಗಳ ಒಕ್ಕೂಟಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾಸ್ಟರ್ ತರಬೇತಿದಾರರಿಗೆ ಮತ್ತು ಕಾಯಕ ಬಂಧುಗಳಿಗೆ ಒಂದು ದಿನದ ಪುನಶ್ಚೇತನ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಸಕ್ರಿಯವಲ್ಲದೆ ಇರುವವರನ್ನು, ಗುರುತಿಸಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮನೆ ಮನೆಗೆ ತೆರಳಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.

ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗುವಂತೆ ಸರ್ಕಾರದ ಅನೇಕ ಯೋಜನೆಗಳಿದ್ದು, ಅವುಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪವಂತೆ ಮಾಡುವುದು ನಮ್ಮ ಮತ್ತು ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಮಿತಿ ಸದಸ್ಯ ಸರಸ್ವತಿ ಕೆ. ಮಾತನಾಡಿ, ಕಾಯಕ ಬಂಧುಗಳು ಕಾಮಗಾರಿ ಸ್ಥಳದಲ್ಲಿ ಯಾವ ರೀತಿ ಕೆಲಸವನ್ನು ನಿರ್ವಹಿಸಬೇಕು, ತಮ್ಮ ಜವಾಬ್ದಾರಿಗಳೇನು ಎಂಬವುದನ್ನು ಈ ತರಬೇತಿಯ ಮೂಲಕ ಪಡೆದು ತಮ್ಮ ತಮ್ಮ ಗ್ರಾಪಂ ಮಟ್ಟದಲ್ಲಿ ಉತ್ತಮ ಕಾಯಕ ಬಂಧುಗಳಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಗ್ರಾಮ ಸ್ವರಾಜ್ ಉತ್ತರ ವಲಯದ ಸಂಯೋಜಕ ಅಶೋಕ ಯರಗಟ್ಟಿ, ಅರಳು ಸಂಸ್ಥೆಯ ನಿರ್ದೇಶಕರಾದ ಕೆ.ಟಿ.ಮೀರಿಲ್, ಸುನೀತಾ, ಪ್ರಕಾಶ ಡೊಳ್ಳೆ, ಸಂಯೋಗ ಸಂಸ್ಥೆ ನಿರ್ದೇಶಕ ಶಫಿವುದ್ದೀನ್, ನಾಗರಾಜ ಶೀಲವಂತ, ನೀಲಕಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net