ನರೇಗಾದಡಿ ಕೆಲಸಕ್ಕೆ ಒತ್ತಾಯಿಸಿ ಇಒಗೆ ಮನವಿ

CTD 16 MANAVI---0004
Published on

ಚಿತ್ರದುರ್ಗ:ಕಾರ್ಮಿಕರಿಗೆ ನರೇಗಾ ಜಾಬ್‌ಕಾರ್ಡ್ ಹಾಗೂ ಕೆಲಸ ನೀಡದೇ ಸತಾಯಿಸುತ್ತಿರುವ ಗ್ರಾಪಂ ಪಿಡಿಒಗಳ ವಿರುದ್ಧ ಕ್ರಮ ಜರುಗಿಸು ವಂತೆ ಹಾಗೂ ಕಾರ್ಮಿಕರಿಗೆ ಕೆಲಸ ಕೊಡ ಬೇಕೆಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಚಿತ್ರದುರ್ಗ ತಾಪಂ ಇಒ ಪಿ.ಎಸ್.ಅನಂತರಾಜು ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕೊಳಾಳು,ಎಗ್ಗೇರಿ,ಎಮ್ಮೇಹಟ್ಟಿ ಗ್ರಾಪಂಗಳಲ್ಲಿ ಕೆಲಸ ಕೊಟ್ಟಿಲ್ಲ. ಯಳಗೋಡು,ಯಳಗೋಡು ಮ್ಯಾಸರಹಟ್ಟಿ,ಚಿಕ್ಕಗೊಂಡನಹಳ್ಳಿ,ಚಿಪ್ಪಿನ ಕೆರೆ,ಗುಡ್ಡದರಂಗವ್ವನಹಳ್ಳಿ,ಆಯಿತೊಳು ನಮೂನೆ 6ನ್ನು ಕೊಟ್ಟಿದ್ದರೂ ಕೆಲಸ ಕೊಟ್ಟಿಲ್ಲ. ಐನಹಳ್ಳಿಯಲ್ಲಿ ಕೆಲಸ ಕೊಡಬೇಕು ಹಾಗೂ ಜಾಬ್ ಕಾರ್ಡ್ ವಿತರಣೆಯಲ್ಲಿ ಸಮಸ್ಯೆಯಾಗಿದೆ.

ಭರಮಸಾಗರ,ಕಾಲಗೆರೆ,ಮಾಡನಾಯಕನಹಳ್ಳಿ,ಚಿಕ್ಕಗೊಂಡನಹಳ್ಳಿ,ಕೊಳಾಳು,ಯಳಗೋಡು,ಗುಡ್ಡದರಂಗವ್ವನಹಳ್ಳಿಯಲ್ಲಿ ಕಳೆದ ಮೂರು ತಿಂಗಳಿಂದ ಜಾಬ್‌ಕಾರ್ಡ್ ಕೊಟ್ಟಿಲ್ಲ, ಹೊಸ ಸೇರ್ಪಡೆ ಕೂಡ ಆಗುತ್ತಿಲ್ಲ. ಇದರಿಂದ ಕೆಲಸವಿಲ್ಲದೆ ನೂರಾರು ಕುಟುಂಬಗಳು ತೊಂದ ರೆಗೆ ಒಳಗಾಗಿವೆ ಹಾಗೂ ಹಲವು ಗ್ರಾಪಂಗಳಲ್ಲಿ ಕೂಲಿ ಭತ್ಯೆಯನ್ನು ಕೊಟ್ಟಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಸಂಘಟನೆ ಪದಾಧಿಕಾರಿ ಗಳು,ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಒಂದು ವಾರದ ನಂತರದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಪ್ರಾರಂಭಿಸುವುದಾಗಿ ಹೇಳಿದರು. ತೇಜೇಶ್ವರಿ,ಕೆ.ಎಂ.ರಾಮಪ್ಪ,ಜಿ.ಎಸ್.ನಾಗರತ್ನಮ್ಮ,ರೇಖಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net