ನರೇಗಾದಡಿ ಕೂಲಿ ಕೆಲಸ ಕೊಡಿ

18ydg03.
Published on


ಯಾದಗಿರಿ: ನರೇಗಾ ಯೋಜನೆಯಡಿ ಕೂಲಿ ಕಾಮರ್ಿಕರಿಗೆ ಸಮರ್ಪಕವಾಗಿ ಕೆಲಸ ನೀಡಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾಮರ್ಿಕರ ಸಂಘಟನೆ ಜಿಲ್ಲಾ ಘಟಕದಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ತಾಲೂಕಿನ ಯರಗೋಳ ಗ್ರಾಪಂ ವ್ಯಾಪ್ತಿಯ ಕೂಲಿ ಕಾಮರ್ಿಕರಿಗೆ ಜುಲೈ ತಿಂಗಳಲ್ಲಿ ಅಜರ್ಿ ನಮೂನೆ 06ನ್ನು ಭತರ್ಿ ಮಾಡಿಕೊಟ್ಟರು ಇಲ್ಲಿಯವರೆಗೆ ಕೆಲಸ ನೀಡಿಲ್ಲ. ಇನ್ನೊಂದು ಕಡೆ ಕಾಮರ್ಿಕರು ಕೆಲಸಗಳಿಲ್ಲದೆ ಸಾಕಷ್ಟು ಸಂಕಷಗಟ ಎದುರಿಸುತ್ತಿದ್ದಾರೆ. ಈಗಾಗಲೇ ಬರಗಾಲ ಆವರಿಸಿದ್ದು, ಕಾಮರ್ಿಕರಿಗೆ ಬೇರೆಡೆ ಕೆಲಸ ಸಹ ಸಿಗುತ್ತಿಲ್ಲ. ಪಂಚಾಯಿತಿ ಅಧಿಕಾರಿಗಳು ಬೇರೆಯವರ ಒತ್ತಡಕ್ಕೆ ಮಣಿದು ಕೆಲಸ ನೀಡದೆ ಇರುವುದು ಅತ್ಯಂತ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡವರು ಕೆಲಸ ನೀಡುವಂತೆ ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮಳೆ ಇಲ್ಲದೆ ಗ್ರಾಮೀಣ ಭಾಗದ ಜನತೆ ಲಕ್ಷಾಂತರ ರೂ.ಸಾಲ ಮಾಡಿಕೊಂಡು ಪರದಾಡುತ್ತಿದ್ದಾರೆ. ಅಲ್ಲದೆ ಕೆಲಸಕ್ಕೆ ದೂರದ ನಗರಗಳಿಗೆ ಗುಳೆ ಹೋಗುವಂತಾಗಿದೆ. ಕೂಡಲೇ ನರೇಗಾ ಯೋಜನೆಯಡಿ ಕೂಲಿ ಕಾಮರ್ಿಕರಿಗೆ ಕೆಲಸ ಕೊಡುವಂತೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net