

ಚಿತ್ರದುರ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಿಂದ ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನರೇಗಾಹಬ್ಬ-2025’ರಲ್ಲಿ ಅತ್ಯುತ್ತಮವಾಗಿ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಿದ ಜಿಲ್ಲೆಯ ಸಾಮಾಜಿಕ ಅರಣ್ಯ ಇಲಾಖೆಗೆ ಅತ್ಯುತ್ತಮ ಜಿಲ್ಲಾಪ್ರಶಸ್ತಿ, ಚಳ್ಳಕೆರೆ ತಾಲೂಕು ಬೆಳಗೆರೆ ಗ್ರಾಪಂಗೆ ಅತ್ಯುತ್ತಮ ಗ್ರಾಪಂ ಪ್ರಶಸ್ತಿ, ಚಿತ್ರದುರ್ಗ ತಾಲೂಕಿನ ದ್ಯಾಮವನಹಳ್ಳಿ ಗ್ರಾಪಂ ರೇಷ್ಮೆ ಬೆಳೆಗಾರರಾದ ಧನಲಕ್ಷ್ಮೀ ಅವರಿಗೆ ವಿಶೇಷ ಪ್ರಸಂಶನಾ ಪತ್ರವನ್ನು ಪ್ರದಾನ ಮಾಡಲಾಯಿತು.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಎಸ್. ಹೊರಟ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಚಿತ್ರದುರ್ಗ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ನರೇಗಾ ಶಾಖೆ ಎಡಿಪಿಸಿ ಟಿ.ಎನ್. ಮೋಹನ್‌ಕುಮಾರ್, ಜಿಲ್ಲಾ ಐಇಸಿ ಸಂಯೋಜಕ ಎಂ.ಎಸ್. ರವೀಂದ್ರನಾಥ್, ಜಿಲ್ಲಾ ಎಂಐಎಸ್ ಸಂಯೋಜಕಿ ಡಿ.ಎಂ. ಸಹನಾ, ಲೆಕ್ಕ ವ್ಯವಸ್ಥಾಪಕ ಸಿದ್ದಲಿಂಗ ತೇಜಸ್, ಬೆಳಗೆರೆ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ, ಪಿಡಿಒ ಸಿ.ಎಂ. ದೇವೇಂದ್ರಪ್ಪ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಕೆ. ಹರೀಶ್ ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.