ನರೇಗಾ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ

13 HRS 01
ಹಿರೀಸಾವೆ ಹೋಬಳಿ ಕಬ್ಬಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಟಿ.ಮಂಜೇಗೌಡ ಮಾತನಾಡಿದರು. ಬಿಳಿಕೆರೆ ರಂಗೇಗೌಡ, ಶಿವನಂಜೇಗೌಡ, ರಾಜೇಗೌಡ, ಕೆ.ಪೃಥ್ವಿಕುಮಾರ್ ಇತರರು ಇದ್ದರು.
Published on

ಹಿರೀಸಾವೆ: ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕಬ್ಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಮಂಜೇಗೌಡ ಹೇಳಿದರು.

ಹೋಬಳಿಯ ಕಬ್ಬಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯನ್ನು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ಮಾತ್ರ ಗ್ರಾಮೀಣ ಭಾಗದ ಪ್ರಗತಿ ಸಾಧ್ಯ. ಈ ಬಾರಿ ಪೂರ್ವ ಮುಂಗಾರಿನಿಂದಲೂ ವಾಡಿಕೆಯಂತೆ ಮಳೆಯಾಗದೆ ಬೇಸಿಗೆಯಂತಹ ವಾತಾವರಣ ಇದೆೆ. ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನಿರ್ವಹಣೆ ಮಾಡಬೇಕು. ಜತೆಗೆ ನೀರಿನ ತೊಂಬೆಗಳನ್ನು ಸ್ವಚ್ಛಗೊಳಿಸಬೇಕು ಎಂದು ನೀರುಗಂಟಿಗಳಿಗೆ ಸೂಚಿಸಿದರು.

ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದೆ ಎಂಬುದರ ಬಗ್ಗೆ ಪಟ್ಟಿ ನೀಡಿದರೆ ಕ್ರಿಯಾಯೋಜನೆ ಸಿದ್ಧಪಡಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷರಾದ ಬಿಳಿಕೆರೆ ರಂಗೇಗೌಡ, ಶಿವನಂಜೇಗೌಡ, ರಾಜೇಗೌಡ, ಕೆ.ಪೃಥ್ವಿಕುಮಾರ್, ಸದಸ್ಯರಾದ ರತ್ನಾ ಕುಮಾರಸ್ವಾಮಿ, ಮಮತಾ, ನಂಜಮ್ಮ, ಸುಮಾ, ಕವಿತಾ, ಮಂಗಳಮ್ಮ, ಜಯಲಕ್ಷ್ಮಮ್ಮ, ಬಸವರಾಜ್, ಚಂದ್ರೇಶ್, ಪಿಡಿಒ ಕಿರಣ್, ಕಾರ್ಯದರ್ಶಿ ಹನುಮೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net