ನರೇಗಾ ಯೋಜನೆಯಡಿ ಜನರಿಗೆ ಉದ್ಯೋಗ ಕಲ್ಪಿಸಿ

28 HANUR 3
Published on

ಹನೂರು: ನರೇಗಾ ಯೋಜನೆಯಡಿ ಜನರಿಗೆ ಸಮರ್ಪಕ ಉದ್ಯೋಗ ನೀಡದ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದ ತಂಡ ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿಗೆ ತೆರಳಿ ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಪಂ ವ್ಯಾಪ್ತಿಯಲ್ಲಿನ ಜನರಿಗೆ ನರೇಗಾ ಯೋಜನೆಯಡಿ ಸಮರ್ಪಕ ಉದ್ಯೋಗ ನೀಡುತ್ತಿಲ್ಲ. ಜತೆಗೆ ಈ ಯೋಜನೆಯ ಕಾಮಗಾರಿಗಳಿಗೆ ಜೆಸಿಬಿ ಯಂತ್ರವನ್ನು ಬಳಕೆ ಮಾಡಲಾಗುತ್ತಿದೆ ಎಂಬುದಾಗಿ ರೈತರು ಸಂಘದ ಗಮನಕ್ಕೆ ತಂದಿದ್ದರು. ಹೊನ್ನೂರು ಪ್ರಕಾಶ್ ನೇತೃತ್ವದ ತಂಡ ಗ್ರಾಪಂ ಕಚೇರಿಗೆ ತೆರಳಿ ಮಾಹಿತಿ ಪಡೆದು ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನರೇಗಾ ಯೋಜನೆಯು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಪ್ರತಿಯೊಬ್ಬರೂ ಉದ್ಯೋಗ ನೀಡಬೇಕು. ಅಂತಹದರಲ್ಲಿ ಉದ್ಯೋಗ ನೀಡದಿರುವುದು ಹಾಗೂ ಕಾಮಗಾರಿಯಲ್ಲಿ ಜೆಸಿಬಿ ಬಳಕೆ ಮಾಡುತ್ತಿರುವುದ ಎಷ್ಟರ ಮಟ್ಟಿಗೆ ಸರಿ? ಇದರಿಂದ ಜನರು ಈ ಯೋಜನೆಯಿಂದ ವಂಚಿತರಾಗುವಂತಾಗಿದೆ. ಆದ್ದರಿಂದ ತಾಪಂ ಇಒ, ಒಂಬುಡ್ಸ್‌ಮನ್ ಒಳಗೊಂಡಂತೆ ಅಕಾರಿಗಳು ನರೇಗಾ ಯೋಜನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಮೂಲಕ ಉದ್ಯೋಗ ನೀಡಬೇಕು. ಕಡೆಗಣಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಅಕಾರಿಗಳು ನ.11 ರಂದು ಗ್ರಾಪಂ ಕಚೇರಿ ಆವರಣದಲ್ಲಿ ನರೇಗಾ ಯೋಜನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಉದ್ಯೋಗ ನೀಡುವ ಸಂಬಂಧ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ತಾಲೂಕು ಪಂಚಾಯಿತಿ ಲೆಕ್ಕಾೀಕ್ಷಕಿ ಶಶಿಕಲಾ, ವ್ಯವಸ್ಥಾಪಕ ರಮೇಶ್, ಪಿಡಿಒ ಶಿವಣ್ಣ, ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಶಾಂತಕುಮಾರ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net