ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಿ

Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಹರೇಗೊಂಡನಹಳ್ಳಿಯಲ್ಲಿ ನರೇಗಾ ಕಾರ್ಮಿಕರು ಗುರುವಾರ ಕಾರ್ಮಿಕರ ದಿನ ಆಚರಿಸಿದರು.

ಕಾಯಕಮಿತ್ರ ರೇವಣ್ಣ ಮಾತನಾಡಿ, ನರೇಗಾ ಯೋಜನೆ ಬಡ ಕುಟುಂಬಗಳ ಜೀವನಕ್ಕೆ ದಾರಿದೀಪವಾಗಿದ್ದು, ಗುಳೆ ಹೋಗುವ ಕುಟುಂಬಗಳ ಕೈಗೆ ಕೆಲಸ, ಹೊಟ್ಟೆತುಂಬ ಊಟ ಸಿಗುತ್ತಿದೆ. ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗ್ರಾಕೂಸ್ ಕಟ್ಟೆ ಉದ್ಘಾಟಿಸಲಾಯಿತು. 25 ಜನ ಹಿರಿಯ ಕೂಲಿ ಕಾರ್ಮಿಕರು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ನರೇಗಾ ತಾಂತ್ರಿಕ ಅಧಿಕಾರಿ ವಿಷ್ಣು, ಸಹಾಯಕ ವೀರಯ್ಯ, ಕಾಯಕಮಿತ್ರರಾದ ಎಚ್.ನಾಗರಾಜ್, ಕವಿತಾ, ಗ್ರಾಕೂಸ್ ಜಿಲ್ಲಾ ಸಂಚಾಲಕ ಕೋಗಳಿ ಮಲ್ಲೇಶ, ಕಾರ್ಯಕರ್ತರಾದ ಶೈನಾಜ್, ಮಂಜುಳಾ, ನಾರಾಯಣ, ನಿಂಗಮ್ಮ, ರತ್ನಮ್ಮ, ಸುಧಾ, ಮರಿಯಪ್ಪ ಎಸ್.ಅಕ್ಕಮಹಾದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net