ನರೇಗಾ ಯೋಜನೆ ಲಾಭ ಪಡೆಯಿರಿ

2 Hulsur 1
ಹುಲಸೂರು ತಾಲೂಕಿನ ಮಿರಖಲ್ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಬುಧವಾರ ಆಯೋಜಿಸಿದ್ದ ಕಾಯಕ ಮಾಸಾಚಾರಣೆ ಕಾರ್ಯಕ್ರಮಕ್ಕೆ ಕಾಯಕ ಯೋಗಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ಸುವರ್ಣಾ ಮೇತ್ರೆ, ತಾಪಂ ಇಒ ವೈಜಣ್ಣ ಫುಲೆ, ಎಡಿ ಮಹಾದೇವ ಜಮ್ಮು, ಪಿಡಿಒ ರಮೇಶ ಮಿಲಿನಕರ, ಗಣಪತಿ ಹಾರಕೂಡೆ ಇತರರಿದ್ದರು.
Published on

ಹುಲಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ಒದಗಿಸುವ ಉದ್ದೇಶದಿಂದ ಕಾಯಕ ಮಾಸಾಚರಣೆ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ತಾಪಂ ಇಒ ವೈಜಣ್ಣ ಫುಲೆ ಹೇಳಿದರು.

ಬಸವ ಜಯಂತಿ ನಿಮಿತ್ತ ಮಿರಖಲ್ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕಾಯಕ ಮಾಸಾಚಾರಣೆ ಕಾರ್ಯಕ್ರಮಕ್ಕೆ ಕಾಯಕ ಯೋಗಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಬೇಸಿಗೆಯಲ್ಲಿ ನರೇಗಾ ಯೋಜನೆಯಡಿ ಹೆಚ್ಚು ಕೂಲಿಕಾರ್ಮಿಕರಿಗೆ ಕೆಲಸ ನೀಡುವ ಉದ್ದೇಶದಿಂದ ಈ ಕಾಯಕ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನರೇಗಾ ಕೂಲಿಕಾರ್ಮಿಕರು ಗ್ರಾಪಂ ಕಾಯಕ ಮಿತ್ರರು ಹಾಗೂ ಕಾಯಕ ಬಂಧುಗಳು ನೀಡುವ ನಮೂನೆ ೬ರನ್ನು ಭರ್ತಿ ಮಾಡಿ ಗ್ರಾಪಂಗೆ ಕೂಲಿ ಕೆಲಸದ ಬೇಡಿಕೆ ಸಲ್ಲಿಸಿ ಕೆಲಸ ಪಡೆಯಿರಿ ಎಂದರು.

ಗ್ರಾಪಂ ಅಧ್ಯಕ್ಷೆ ಸುವರ್ಣಾ ಮೇತ್ರೆ ಮಾತನಾಡಿ, ನರೇಗಾ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕೂಲಿಕಾರರೊಂದಿಗೆ ಈ ವರ್ಷ ಬಸವ ಜಯಂತಿ ಆಚರಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ. ಬಸವಣ್ಣನವರ ಭಕ್ತಿ-ದಾಸೋಹ-ಕಾಯಕ ತತ್ವಗಳು ಸಮಾಜದ ಏಳಿಗೆಗೆ ದಾರಿ ದೀಪಗಳಾಗಿವೆ ಎಂದರು.

ಮಿರಖಲï ಗ್ರಾಪಂ ಉಪಾಧ್ಯಕ್ಷ ಸತ್ಯವಾನ ಶಿಂಧೆ, ಪಿಡಿಒ ರಮೇಶ ಮಿಲಿಂದಕರ, ಮಲ್ಲಿಕಾರ್ಜುನ ಕಂಬಳಿ, ಐಇಸಿ ಸಂಯೋಜಕ ಗಣಪತಿ ಹಾರಕೂಡೆ, ಗ್ರಾಪಂ ಸದಸ್ಯ ಸತೀಶ ಪಾಟೀಲ್, ನಾಗೇಶ ಮದ್ನೆ, ಗ್ಯಾರಂಟಿ ಯೋಜನೆ ಸಮಿತಿಯ ಸದಸ್ಯ ಭಾಗವತ ಪುಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net