ನರೇಗಾ ದಿನ ಆಚರಣೆ

sri narega
ಶೃಂಗೇರಿ ತಾಪಂ ಆವರಣದಲ್ಲಿ ಸಸಿ ನೆಟ್ಟು ನರೇಗಾ ದಿನ ಆಚರಿಸಲಾಯಿತು. ಇಒ ಎಚ್.ಸುದೀಪ್, ಪಾರ್ವತಿ, ನಾಗಭೂಷಣ್, ಹರೀಶ್ ಇತರರಿದ್ದರು.
Published on

ಶೃಂಗೇರಿ: ತಾಲೂಕು ಆಡಳಿತದಿಂದ ಗುರುವಾರ ನರೇಗಾ ದಿನ ಆಚರಿಸಲಾಯಿತು.

ಗುರುವಾರ ತಾಪಂ ಆವರಣದಲ್ಲಿ ಇಒ ಎಚ್.ಸುದೀಪ್ ಅವರು ಸಸಿ ನೆಡುವ ಮೂಲಕ ನರೇಗಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ನರೇಗಾ ಯೋಜನೆಗಳ ಸೌಲಭ್ಯಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಕೃಷಿ, ಸರ್ಕಾರಿ ಶಾಲೆಗೆ ಸೌಲಭ್ಯ, ಕುರಿ, ಕೋಳಿಶೆಡ್ ನಿರ್ಮಾಣ ಇತ್ಯಾದಿ ಸವಲತ್ತು ನೀಡುತ್ತಿದ್ದಾರೆ ಎಂದರು. 2024-25ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಪ್ರಗತಿ ಸಾಧಿಸಿದ ಒಂಬತ್ತು ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳಿಗೆ, ಡೇಟಾ ಎಂಟ್ರಿ ಆಪರೇಟರ್‌ಗಳಿಗೆ, ಕರ ವಸೂಲಿಗಾರರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ತಾಪಂ ಅಧಿಕಾರಿಗಳಾದ ಪಾರ್ವತಿ, ಸೌಮ್ಯಾ, ನಾಗಭೂಷಣ್, ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net