ನರೇಗಾ ಕಾಮಗಾರಿಗಳಿಗೆ ಒತ್ತಾಯಿಸಿ ಪ್ರತಿಭಟನೆ

CTD STRIKE.....
Published on

ಚಿತ್ರದುರ್ಗ: ನರೇಗಾ ಕಾಮಗಾರಿ ಸಮರ್ಪಕ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ‌್ಯಕರ್ತರು ಗುರುವಾರ ಜಿಪಂ ಬಳಿ ಪ್ರತಿಭಟನೆ ನಡೆಸಿದರು.

ಚಿತ್ರದುರ್ಗ,ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ನರೇಗಾ ಕಾಮಗಾರಿಗಳ ಅನುಷ್ಠಾನಗೊಳಿಸುವ ಮೂಲಕ ಗ್ರಾಮೀ ಣರಿಗೆ ಕೆಲಸ ಕೊಡಬೇಕು. ಗ್ರಾಒಂ ಪಿಡಿಒಗಳು ಮತ್ತು ತಾಪಂ ಇಒಗಳ ನಿರ್ಲಕ್ಷದಿಂದ ದುಡಿಯುವ ಕೈಗಳನ್ನ ಕಟ್ಟಿ ಹಾಕಿದಂತಾಗಿದೆ. ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೆ ನಿರ್ಲಕ್ಷ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.

ಚಳ್ಳಕೆರೆ ತಾಲೂಕಿನ ಗ್ರಾಪಂಗಳಾದ ದೊಡ್ಡೇರಿ,ಚೌಳೂರು, ಪಗಡಲ ಬಂಡೆ ದೇವರ, ಮರಕುಂಟೆ, ಜಾಜೂರು, ನನ್ನಿವಾಳ ಹಾಗೂ ಚಿತ್ರದುರ್ಗ ತಾಲೂಕಿನ ಗ್ರಾಪಂಗಳಾದ ಕಲ್ಕೆರೆ,ತುರುವನೂರು,ಕೋಗುಂಟೆ, ಚಿಕ್ಕಗೊಂಡನಹಳ್ಳಿ ಮತ್ತು ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಗ್ರಾಪಂ ವ್ಯಾಪ್ತಿಗಳಲ್ಲಿ ಉದ್ಯೋಗ ಖಾತ್ರಿಯಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಡಿಎಸ್ ಕೆ.ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು.

ತೇಜಸ್ವಿನಿ,ಕವಿತಾ, ರಂಜಿತಾ, ಗೀತಮ್ಮ, ಬೊಮ್ಮಕ್ಕ, ರಾಮಪ್ಪ, ಭಾರತಿ, ಆನಂದ, ಓಬಣ್ಣ, ಚೆನ್ನಮ್ಮ, ನಾಗರಾಜ್, ಈರಮ್ಮ, ಚಿತ್ರಮ್ಮ, ವಿನೋದಮ್ಮ, ಕಾಟಮ್ಮ, ಶಿವಮ್ಮ, ಬೋರಮ್ಮ, ಮಂಜಮ್ಮ, ಭಾಗ್ಯಮ್ಮ, ರಾಧಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net