ನರೇಗಾ ಕಾಮಗಾರಿಗಳ ಅನುಷ್ಠಾನ ಸಮರ್ಪಕ ಆಗಿರಲಿ

Srishaila Diddimani, Honwada, Bijjargi, Babanagar, Thikota,
ಹೊನವಾಡ ಗ್ರಾಮದ ಅಮೃತ ಸರೋವರದ ದಡದಲ್ಲಿ ಅರಣ್ಯ ಇಲಾಖೆಯವರು ನರೇಗಾ ಯೋಜನೆಯಡಿ ನಾಟಿ ಮಾಡಿರುವ ಸಸಿಗಳನ್ನು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ ವೀಕ್ಷಣೆ ಮಾಡಿದರು. ಬಿ.ಎಸ್.ಮುಗನೂರಮಠ, ಸಂತೋಷಕುಮಾರ ಆಜೂರ, ಅರುಣಕುಮಾರ ದಳವಾಯಿ ಇತರರಿದ್ದರು.
Published on

ತಿಕೋಟಾ: ತಾಲೂಕಿನ ಹೊನವಾಡ, ಬಿಜ್ಜರಗಿ ಹಾಗೂ ಬಾಬಾನಗರ ಗ್ರಾಮ ಪಂಚಾಯಿತಿಗೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯಿಂದ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳನ್ನು ಶನಿವಾರ ಪರಿಶೀಲನೆ ನಡೆಸಿದರು.

ಆರಂಭದಲ್ಲಿ ಹೊನವಾಡ ಗ್ರಾಮದ ಅಮೃತ ಸರೋವರದ ದಡದಲ್ಲಿ ಅರಣ್ಯ ಇಲಾಖೆಯವರು ನರೇಗಾ ಯೋಜನೆಯಡಿ ನಾಟಿ ಮಾಡಿರುವ ಸಸಿಗಳನ್ನು ವೀಕ್ಷಣೆ ಮಾಡಿದರು.

ಸದರಿ ಸರೋವರದ ದಡದ ಮೇಲೆ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೂಡದೆ ಕೇವಲ ಜನರ ಸಂಚಾರಕ್ಕೆ ಅನುವು ಮಾಡಿ ಕೂಡಲು ತಿಳಿಸಿದರು. ನಂತರ ಗ್ರಾಮ ಪಂಚಾಯಿತಿ ವತಿಯಿಂದ ಅನುಷ್ಠಾನಗೊಂಡ ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಬೊರ್‌ವೆಲ್ ರಿಚಾರ್ಜ್ ಫಿಟ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಬೊರ್‌ವೆಲ್ ರಿಚಾರ್ಜ್ ಫಿಟ್ ಹತ್ತಿರ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಅನುಕೂಲ ಕಲ್ಪಿಸುವ ಜತೆಗೆ ಸ್ವಚ್ಛತೆ ಕಾಪಾಡಲು ಸ್ಥಳದಲ್ಲಿದ್ದ ಪಿಡಿಒ ಅವರಿಗೆ ಸೂಚಿಸಿದರು.

ತದನಂತರ ಬಿಜ್ಜರಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಸಿ ನಾಟಿ ಮಾಡಿರುವುದನ್ನು ವೀಕ್ಷಿಸಿ ಸಸಿಗಳನ್ನು ಉತ್ತಮವಾಗಿ ಪೋಷಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ನಂತರ, ಬಾಬಾನಗರ ಗ್ರಾಮದಲ್ಲಿ ಕಳ್ಳಕವಟಗಿ ರಸ್ತೆ ಪಕ್ಕದಲ್ಲಿ ಕೈಗೊಂಡ ಸಸಿ ನಾಟಿ ಮಾಡುವ ಕಾಮಗಾರಿ ವೀಕ್ಷಣೆ ಮಾಡಿದರು. ಗ್ರಾಮ ಪಂಚಾಯಿತಿ ವತಿಯಿಂದ ಸಿ.ಡಿ ನಿರ್ಮಾಣ ಮಾಡಿರುವ ಕಾಮಗಾರಿ ವೀಕ್ಷಣೆ ಮಾಡಿ, ಬಾಕಿ ಉಳಿದಿರುವ ಕೆಲಸವನ್ನು ನಿಯಮಾನುಸಾರ ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಆಜೂರ, ಜಿಪಂ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಜಿಪಂ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜನಾಧಿಕಾರಿ ಪಿ.ಎಸ್.ಪಾಟೀಲ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ಬಿ.ಮನಗೂಳಿ, ಸುರೇಶ ಕಳ್ಳಿಮನಿ, ರೇಣುಕಾ ಸೋಲಾಪುರ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಅರಣ್ಯ ಇಲಾಖೆಯ ಚಂದ್ರಶೇಖರ ಪಟ್ಟಣಶೆಟ್ಟಿ, ರವಿ ರಾಠೋಡ ಸೇರಿದಂತೆ ನರೇಗಾ ಯೋಜನೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net