ನರೇಗಾ ಕಾಮಗಾರಿ ನಾಮಫಲಕ ಧ್ವಂಸ

IMG-20231201-WA0216
Published on

ಕೆ.ಆರ್.ಪೇಟೆ: ತಾಲೂಕಿನ ಮಾಕವಳ್ಳಿ ಗ್ರಾಮದ ಪುರಾತನ ಕಲ್ಯಾಣಿ ಪುನಃಶ್ಚೇತನಕ್ಕಾಗಿ ಕೈಗೊಳ್ಳಲಾಗಿದ್ದ ನರೇಗಾ ಕಾಮಗಾರಿ ನಾಮಫಲಕದ ಬೋರ್ಡ್ ಅನ್ನು ಕೆಡವಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಗ್ರಾಮಸ್ಥರು ಪಿಡಿಒ ಶೈಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.


ಗ್ರಾಮದ ಪುರಾತನ ಮಾಕವಳ್ಳಿ ಕಲ್ಯಾಣಿ ತುಂಬ ಶಿಥಿಲವಾಗಿದೆ. ಅದರ ಪುನಃಶ್ಚೇತನಕ್ಕಾಗಿ ನರೇಗಾ ಯೋಜನೆಯಡಿ ಕಾಮಗಾರಿ ಅನುಷ್ಠಾನಕ್ಕೆ ಪಂಚಾಯಿತಿ ಮುಂದಾಗಿದ್ದು, ಗುರುವಾರ ಕಾಮಗಾರಿ ಸ್ಥಳದಲ್ಲಿ ಪಿಡಿಒ ನಾಮಫಲಕದ ಬೋರ್ಡ್ ನಿರ್ಮಾಣ ಮಾಡಿಸಿದ್ದರು. ಗುರುವಾರ ರಾತ್ರಿ ಯಾರೋ ಕಿಡಿಗೇಡಿಗಳು ಬೋರ್ಡ್‌ನ್ನು ಕೆಡವಿದ್ದಾರೆ.


ಶುಕ್ರವಾರ ಬೆಳಗ್ಗೆ ಗ್ರಾಮಸ್ಥರಿಗೆ ಈ ಬಗ್ಗೆ ತಿಳಿದುಬಂದಿದ್ದು, ಸರ್ಕಾರದ ಆಸ್ತಿ ನಷ್ಟ ಮಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಶಿಸ್ತು ಕ್ರಮ ಜರುಗಿಸುವಂತೆ ಪಿಡಿಒಗೆ ಮನವಿ ಸಲ್ಲಿಸಿದರು. ಜತಗೆ ಜಿಪಂ ಸಿಇಒ ಅವರಿಗೆ ಈ ಮೇಲ್ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ ಸಲ್ಲಿಸಿರುವುದಾಗಿ ಗ್ರಾಮಸ್ಥರು ವಿಜಯವಾಣಿಗೆ ತಿಳಿಸಿದರು.


ನಿವೃತ್ತ ಶಿಕ್ಷಕ ದೊಡ್ಡೇಗೌಡ, ನಿವೃತ್ತ ಪೋಸ್ಟ್ ರಾಜೇಗೌಡ, ಯುವ ಮುಖಂಡ ಕೇಶವ್, ಮನು, ಪಾಪೇಗೌಡ, ಮುಖಂಡರಾದ ದಾಸೇಗೌಡ, ರಂಗೇಗೌಡ, ಸಾಕಮ್ಮ ಸೇರಿ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net