ನರೇಗಲ್ಲ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಡಿ.ಎಚ್. ಪರಂಗಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ

10Naregal1 D.H. Parangi
Published on

ನರೇಗಲ್ಲ: ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಡಿ.ಎಚ್. ಪರಂಗಿ ಅವರು 2020-21ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಹಾಜರಾತಿ ಆಂದೋಲನ, ಸ್ವಂತ ಖರ್ಚಿನಲ್ಲಿ ಪಾಠೋಪಕರಣ ಖರೀದಿ, ಎಲ್​ಕೆಜಿ, ಯುಕೆಜಿ ತರಗತಿಗಳ ಪ್ರಾರಂಭ, ವಿಶೇಷ ಕಲಿಕಾ ಪದ್ಧತಿ ಅಳವಡಿಕೆಯೊಂದಿಗೆ ಗುಣಾತ್ಮಕ ಶಿಕ್ಷಣ, ಬಡ ಮಕ್ಕಳ ದತ್ತು ಮತ್ತಿತರ ಪ್ರಯೋಗಗಳ ಮಾಡಿ ಮಾದರಿ ಶಾಲೆಯನ್ನಾಗಿಸಿದ್ದಾರೆ. ಅವರ ಸಾಧನೆಗೆ ತಾಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿವೆ. ಅವರನ್ನು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net