

ಆನಂದಪುರ: ಇಲ್ಲಿಗೆ ಸಮೀಪದ ನರಸೀಪುರ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿಯಿತು. ಶ್ರೀಗಳು 1960ರಲ್ಲಿ ಈ ಶಾಲೆಯ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಸ್ಮರಿಸಲಾಯಿತು.
ಶಾಲೆಗೆ ಅಗತ್ಯ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ನಮ್ಮೂರ ಗ್ರಾಮಸ್ಥರ ನಡೆ ಕಿರಿಯ ಪ್ರಾಥಮಿಕ ಶಾಲೆಗೆ ಎಂಬ ಘೋಷಣೆ ಮತ್ತು ಪ್ರತಿಜ್ಞಾ ವಿಧಿ ಕೈಗೊಳ್ಳಲಾಯಿತು.
ಇರುವಕ್ಕಿ ವಿವಿಯ ಉಪನ್ಯಾಸಕ ಡಾ. ಕೆ.ಸಿ.ಶಶಿಧರ ಕಾರ್ಯಕ್ರಮ ಉದ್ಘ್ಘಾಟಿಸಿ ಗ್ರಾಮಸ್ಥರು ಒಗ್ಗಟ್ಟಿನಿಂದ ಶ್ರಮಿಸಿದರೆ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗೂ ಮೀರುವಂತೆ ಅಭಿವೃದ್ಧಿ ನಡೆಸಿ ಮಾದರಿ ಶಾಲೆ ಮಾಡಲು ಸಾಧ್ಯವಿದೆ ಎಂದರು.