ನರಸೀಪುರ ಆತ್ಮರಾಮದೇವರ ಬ್ರಹ್ಮರಥೋತ್ಸವ; ಜಾತ್ರೆಗೆ ವಿವಿಧೆಡೆಯಿಂದ ಸಾವಿರಾರು ಭಕ್ತರ ಆಗಮನ

9 dpt 2 narasipura rathostava
Published on

ದಾಬಸ್‌ಪೇಟೆ: ಸೋಂಪುರ ಹೋಬಳಿಯ ನರಸೀಪುರ ಗ್ರಾಮದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಶ್ರೀ ಆತ್ಮರಾಮದೇವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಭಾನುವಾರ ನೆರವೇರಿತು.

ದೇವಸ್ಥಾನದಲ್ಲಿ ಬೆಳಗ್ಗೆ ಧ್ವಜಾರೋಹಣ, ಬೆಟ್ಟದ ಉತ್ಸವ, ಕಲ್ಯಾಣೋತ್ಸವ, ಗಜೇಂದ್ರ ಮೋಕ್ಷ ಪಾರಾಯಣ, ವಿಶೇಷ ಪೂಜೆ, ಹೋಮ, ಹವನಗಳನ್ನು ನಡೆಸಲಾಯಿತು. ನಂತರ ರಥ ಪ್ರತಿಷ್ಠೆ, ರಥಾಂಗ ಹೋಮ, ಯಾತ್ರಾಧಾನ, ಹಾಲೆನಹಳ್ಳಿ ಗ್ರಾಮಸ್ಥರಿಂದ ಮುಡಿತೇರು, ಧಾರ್ಮಿಕ ಕಾರ್ಕ್ರಮಗಳೊಂದಿಗೆ ವೀರಗಾಸೆ ನೃತ್ಯ, ನರಸೀಪುರತೋಪಿನಲ್ಲಿ ಹರಿಸೇವೆ, ಗೋವಿಂದ ನಾಮಸ್ಮರಣೆಯಿಂದ ರಥೋತ್ಸವ ಅದ್ದೂರಿಯಾಗಿ ನೆರವೇರಿತು.

ಸುಮಾರು 20ಕ್ಕೂ ಹೆಚ್ಚು ಕೊಪ್ಪಲುಗಳನ್ನು ಹಾಕಿ ಬಂದಿರುವ ಭಕ್ತಾದಿಗಳಿಗೆ ಮಜ್ಜಿಗೆ, ಕೊಸಂಬರಿ, ಅನ್ನ ಸಂತರ್ಪಣೆ ಮತ್ತು ಪಾನಕ ವಿನಿಯೋಗ ನಡೆಯಿತು. ಗ್ರಾಮದ ಕಮಲಮ್ಮ ಎನ್.ಎಸ್.ಸಂಪಗಿರಾಮಯ್ಯ ಮಕ್ಕಳಿಂದ ವಿಶೇಷವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ನೂತನ ರಥದ ದಾನಿಗಳಾದ ಗ್ರಾಮದ ನರಸಮ್ಮ ಅವರ ಪುತ್ರ ಎನ್.ಪಿ.ಸೀತರಾಮಯ್ಯ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ತಾಪಂ ಮಾಜಿ ಅಧ್ಯಕ್ಷ, ಪಟೇಲ್ ಬೆಟ್ಟಸ್ವಾಮಿಗೌಡ, ಪ್ರಧಾನ ಅರ್ಚಕ ರಘುನಂದನ್, ಕಾರ್ಯದರ್ಶಿ ಸುಂದರ್ ರಾವ್, ಕನ್ವೀನರ್ ಚಲುವರಾಜಣ್ಣ, ಸೋಂಪುರ ಜಿಪಂ ಸದಸ್ಯ ನಂಜುಂಡಯ್ಯ, ತಾಪಂ ಸದಸ್ಯ ಜಿ. ಪ್ರಕಾಶ್, ನರಸೀಪುರ ಗ್ರಾಪಂ ಅಧ್ಯಕ್ಷ ನಾಗರಾಜು, ಮಾಜಿ ಗ್ರಾಪಂ ಅಧ್ಯಕ್ಷ ಮಾಕೇನಹಳ್ಳಿ ಬಿ.ಪ್ರಕಾಶ್, ರತ್ನಮ್ಮ ಭೀಮರಾಜು, ಉಪಾಧ್ಯಕ್ಷೆ ಕಾಂತಮ್ಮಗಂಗರಾಜು, ಸದಸ್ಯರಾದ ಕಮಲ, ನಾಗರತ್ನ. ಕೆ.ರಾಮಾಂಜನೇಯ, ಹನುಮಂತರಾಜು. ರಾಧಾ ಸಿ. ಮಹೇಶ್, ಎಲ್.ಎಸ್.ರಮೇಶ್, ಆಂಜಿನಮ್ಮ, ಮುಖಂಡರಾದ ವಿಶ್ವನಾಥ ಬಾಬು, ನರೇಂದ್ರ ಬಾಬು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net