ನರಗುಂದದಲ್ಲಿ ಮುಂದುವರಿದ ಭೂಕುಸಿತ

25 NRD-2A
Published on

ನರಗುಂದ: ಅಂತರ್ಜಲಮಟ್ಟ ಹೆಚ್ಚಳವಾಗಿದ್ದರಿಂದ ಪಟ್ಟಣದ ಕಸಬಾ ಬಡಾವಣೆಯ ಮನೆಯೊಂದರಲ್ಲಿ ಮಂಗಳವಾರ ಮಧ್ಯಾಹ್ನ ಮತ್ತೆ ಏಕಾಏಕಿ ಭೂಕುಸಿತ ಉಂಟಾಗಿದೆ. ಇದರಿಂದ ಆಳವಾದ ಗುಂಡಿ ಸೃಷ್ಟಿಯಾಗಿದ್ದು, ಪಟ್ಟಣದಲ್ಲಿ ಭೂಕುಸಿತ ಪ್ರಕರಣಗಳು ಮತ್ತೇ ಮುಂದುವರಿದಿವೆ.

ಪಟ್ಟಣದ ಸಾಲಿ ಬಸವೇಶ್ವರ ದೇವಸ್ಥಾನದ ಬಳಿ ಅಮೃತಗೌಡ ಕರಿಗೌಡ್ರ ಎಂಬುವರ ಮನೆಯಲ್ಲಿ ಈ ಭೂಕುಸಿತ ಉಂಟಾಗಿದ್ದರಿಂದ ಕುಟುಂಬಸ್ಥರು ಹಾಗೂ ಬಡಾವಣೆಯ ನಿವಾಸಿಗಳ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಮೃತಗೌಡರ ಮನೆಯ ದೇವರ ಕೋಣೆಯ ಬಳಿಯ ಎರಡು ಕಂಬಗಳು ಕೆಲ ದಿನಗಳಿಂದ ದುರಸ್ತಿಯಲ್ಲಿದ್ದವು. ಈ ಕಂಬಗಳನ್ನು ತೆಗೆದು ಬೇರೆ ಕಂಬ ಅಳವಡಿಸುವಾಗ ಕಂಬದ ತೊಲೆಗೆ ಹಚ್ಚಿದ್ದ ಜಾಕ್ ಸ್ಥಳದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿರುವಂತೆ ಕುಸಿದಿತ್ತು. ಇದನ್ನು ಗಮನಿಸಿದ ಅಮೃತಗೌಡರು ಸುತ್ತಿಗೆಯಿಂದ ಜಾಕ್ ಕೆಳಗಿರುವ ಕಲ್ಲಿಗೆ ಹೊಡೆದಾಗ ಏಕಾಏಕಿ ಭೂಕುಸಿತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಮಾಹಿತಿ ಅರಿತ ಪುರಸಭೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net