ನರಗುಂದದಲ್ಲಿ ಆಲಿಕಲ್ಲು ಮಳೆ

4 NRD-5
Published on

ನರಗುಂದ: ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಸಮೇತ ಭಾರಿ ಮಳೆಯಾಗಿದೆ. ಇದರಿಂದ ತಾಲೂಕಿನ ರೈತರು ತಮ್ಮ ಜಮೀನಿನಲ್ಲಿರುವ ವಿವಿಧ ಹಿಂಗಾರು ಹಂಗಾಮಿನ ಉತ್ಪನ್ನಗಳ ಸಂರಕ್ಷಣೆಗೆ ಪರದಾಡಿದರು.

ತಾಲೂಕಿನ ಬಹುತೇಕ ರೈತರು ಹಿಂಗಾರು ಹಂಗಾಮಿನ ಬೆಳೆಗಳನ್ನು ಕಟಾವು ಮಾಡಲು ಸಾಧ್ಯವಾಗಿಲ್ಲ. ಇನ್ನೂ ಕೆಲ ರೈತರು ತಮ್ಮ ಬೆಳೆಗಳನ್ನು ಕಟಾವು ಮಾಡಿದ್ದರೂ ಕೂಡ ಅವುಗಳನ್ನು ಮನೆಗೆ ತರಲು ಸಾಧ್ಯವಾಗಿಲ್ಲ. ಇದರಿಂದಾಗಿ ರೈತರು ತಮ್ಮ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಪರದಾಡಬೇಕಾಯಿತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net