ನರಗುಂದಕ್ಕೂ ಬಂತು 200 ಟನ್ ಯೂರಿಯಾ

6 NRD-4
Published on

ನರಗುಂದ: ತಾಲೂಕಿನ ವಿವಿಧ ಮಾರಾಟ ಮಳಿಗೆಗಳಿಗೆ ಗುರುವಾರ 200 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು, ರೈತರು ಮುಗಿಬಿದ್ದು ಖರೀದಿಸುವ ಸ್ಥಿತಿ ನಿರ್ವಣವಾಗಿದೆ.

ಈ ಕುರಿತು ವಿಜಯವಾಣಿಯಲ್ಲಿ ಆ.4 ರಂದು ‘ಯೂರಿಯಾ ಗೊಬ್ಬರಕ್ಕಾಗಿ ನೂಕುನುಗ್ಗಲು’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ವಿಸ್ಕೃತ ವರದಿಯಿಂದ ಎಚ್ಚೆತ್ತುಕೊಂಡಿರುವ ಕೃಷಿ ಅಧಿಕಾರಿಗಳು, ಗೊಬ್ಬರ ಪೂರೈಕೆಗೆ ಮುಂದಾಗಿದ್ದಾರೆ.

ಗೊಬ್ಬರದ ಅಭಾವ ಅವಲೋಕಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಕೃಷಿ ಆಯುಕ್ತರೊಂದಿಗೆ ಮಾತನಾಡಿ, ನರಗುಂದ ತಾಲೂಕಿಗೆ ಎರಡ್ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 200 ಟನ್ ಯೂರಿಯಾ ರಸಗೊಬ್ಬರ ಪೂರೈಸುವಂತೆ ಸೂಚಿಸಿದ್ದರು. ಹೀಗಾಗಿ ಗುರುವಾರ ಪಟ್ಟಣ ಹಾಗೂ ತಾಲೂಕಿನ ಕೊಣ್ಣೂರ, ಶಿರೋಳ ಸೇರಿ ವಿವಿಧ ಗ್ರಾಮಗಳ ಮಳಿಗೆಗಳಿಗೆ ಗೊಬ್ಬರ ಪೂರೈಸಲಾಗಿದೆ.

ಅದಲ್ಲದೆ, ಇನ್ನೂ ಹೆಚ್ಚುವರಿಯಾಗಿ 100 ಟನ್ ಜುವಾರಿ ಯೂರಿಯಾ ರಸಗೊಬ್ಬರ ಶುಕ್ರವಾರದೊಳಗೆ ತಾಲೂಕಿಗೆ ಬರಲಿದೆ. ಆದ್ದರಿಂದ ತಾಲೂಕಿನ ರೈತರು ಯಾವುದೇ ಗೊಂದಲಕ್ಕೆ ಒಳಗಾಗದೆ ಶಾಂತ ರೀತಿಯಿಂದ ಗೊಬ್ಬರ ಪಡೆದುಕೊಳ್ಳಬೇಕು. ಗೊಬ್ಬರ ಪೂರೈಕೆಯಲ್ಲಿ ವಿಳಂಬ ಧೋರಣೆ ಅನುಸರಿಸಿದ ಪಟ್ಟಣದ 6 ಖಾಸಗಿ ಮಾರಾಟಗಾರರಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ತಾಲೂಕಿನ ರೈತರು ಪರಸ್ಪರ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್​ಗಳನ್ನು ಬಳಸುವ ಮೂಲಕ ಕರೊನಾ ನಿಯಂತ್ರಣಕ್ಕೆ ಕೈಜೋಡಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮನವಿ ಮಾಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net