ನರಗುಂದ ಪುರಸಭೆ ಮುಖ್ಯಾಧಿಕಾರಿ, ಸದಸ್ಯ ತರಾಟೆಗೆ

17 NRD-3B
Published on

ನರಗುಂದ: ಸಮರ್ಪಕ ರಸ್ತೆ, ಚರಂಡಿ ನಿರ್ವಿುಸುವಂತೆ ಆಗ್ರಹಿಸಿ ಪಟ್ಟಣದ ವಿದ್ಯಾಗಿರಿ ಬಡಾವಣೆ ನಿವಾಸಿಗಳು ಗುರುವಾರ ಏಕಾಏಕಿ ಪ್ರತಿಭಟನೆ ನಡೆಸಿ ಪುರಸಭೆ ಸದಸ್ಯ ಸುನೀಲ ಕುಷ್ಟಗಿ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವಿದ್ಯಾಗಿರಿ ಬಡಾವಣೆಯ ರಸ್ತೆ ಹಾಗೂ ಚರಂಡಿಗಳನ್ನು ಸುಮಾರು ವರ್ಷಗಳಿಂದ ನಿರ್ವಿುಸಿಲ್ಲ. ಈ ಹಿಂದಿದ್ದ ಹಳೆಯ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು, ಮಳೆಯ ನೀರು ಸಂಗ್ರಹಗೊಳ್ಳುತ್ತಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘ, ಚಿಕೂನ್ ಗುನ್ಯಾ ಹಾಗೂ ವಿವಿಧ ಸಾಂಕ್ರಾಮಿಕ ರೋಗ ಹರಡುತ್ತಿವೆ. ಈ ಕುರಿತು ಪುರಸಭೆ ಸದಸ್ಯ ಸುನೀಲ ಕುಷ್ಟಗಿ ಅವರಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಪುರಸಭೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ರಸ್ತೆ ಗುಂಡಿಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿದೆ. ಕೂಡಲೇ ರಸ್ತೆ ಹಾಗೂ ಚರಂಡಿಗಳನ್ನು ನಿರ್ವಿುಸಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಸದಸ್ಯ ಸುನೀಲ ಕುಷ್ಟಗಿ, ‘ಲಾಕ್​ಡೌನ್ ಹಿನ್ನೆಲೆ ಸಾಕಷ್ಟು ಕೆಲಸದ ಒತ್ತಡವಿತ್ತು. ಇದೀಗ ಅನ್​ಲಾಕ್ ಆಗಿರುವುದರಿಂದ ವಿದ್ಯಾಗಿರಿ ಹಾಗೂ ಪಟ್ಟಣದ ವಿವಿಧ ಬಡಾವಣೆಗಳ ರಸ್ತೆ, ಚರಂಡಿಗಳ ನಿರ್ವಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಮರ್ಪಕ ರಸ್ತೆ ನಿರ್ವಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು. ಆಗ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.

ಜಗದೀಶ ಬೆಳವಟಗಿ, ಟಿ.ಎಸ್. ಆಲೂರ, ಸಿದ್ದಪ್ಪ ಕತ್ತಿ, ಆನಂದ ಮಡಿವಾಳರ, ಸತೀಶ ಹನಸಿ, ರಿಯಾಜ್ ಅತ್ತಾರ, ಶಿವಪ್ಪ ದೋತ್ರದ, ಎಂ.ಬಿ. ಮಾಟರಂಗಿ, ಡಿ.ಎಚ್. ಕಾಪ್ಸೆ, ದೇವೇಂದ್ರಪ್ಪ ಹೊಳೆಯಣ್ಣವರ, ಮಧುಕರ ಮೊಟರಂಗಿ, ಜಿ.ಎಸ್. ಯಾವಗಲ್, ಎಂ.ಎಸ್. ಯಾವಗಲ್ಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net