

ನರಗುಂದ: ನರಗುಂದ ಗುಡ್ಡವನ್ನು ಕೆಲವರು ಅವ್ಯಾಹತವಾಗಿ ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಸಂಪೂರ್ಣ ನಿಯಂತ್ರಿಸುವ ಉದ್ದೇಶದಿಂದ ಅರಣ್ಯ ಸಂಪತ್ತು ಹೆಚ್ಚಿಸುವ ಕರಾರಿನೊಂದಿಗೆ ಗುಡ್ಡವನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪುರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರಾಭಿವೃದ್ಧಿ ಇಲಾಖೆಯಿಂದ 4 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯದ ಡಿವೈಡರ್ ಅನ್ನು ವೈಜ್ಞಾನಿಕವಾಗಿ ನಿರ್ವಿುಸಲು ಸೂಚಿಸಿದ್ದೇನೆ. ಸಚಿವ ಎಂಟಿಬಿ ನಾಗರಾಜ್ ಅವರೊಂದಿಗೆ ರ್ಚಚಿಸಿ, ಹೆಚ್ಚುವರಿ 5 ಕೋಟಿ ರೂಪಾಯಿ ಅನುದಾನ ಕೊಡಿಸುತ್ತೇನೆ. ನಗರದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟಿಕೊಂಡು ಎಲ್ಲ ವಾರ್ಡ್ಗಳಲ್ಲಿ ಮಹತ್ವದ ಕೆಲಸ, ಕಾರ್ಯಗಳನ್ನು ಪುರಸಭೆಯಿಂದ ಕೈಗೊಳ್ಳಬೇಕು ಹೇಳಿದರು.
ವಿರೋಧ ಪಕ್ಷದ ಮುಖಂಡ ಅಪ್ಪಣಗೌಡ ನಾಯ್ಕರ್ ಮಾತನಾಡಿ, ಪುರಸಭೆಯಿಂದ ನಿರ್ವಿುಸಿರುವ ವಾಣಿಜ್ಯ ಮಳಿಗೆಗಳು ಒಬ್ಬರ ಹೆಸರಿನಲ್ಲಿ ಮೂರು ಹಂಚಿಕೆಯಾಗಿವೆ. ಮಳಿಗೆ ಪಡೆದುಕೊಂಡಿರುವವರು ಸರಿಯಾಗಿ ತೆರಿಗೆ, ಬಾಡಿಗೆ ಕಟ್ಟುತ್ತಿಲ್ಲ. ಇದರಿಂದ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನೆಡೆ ಉಂಟಾಗುತ್ತಿದೆ. ಮಳಿಗೆಗಳ ಮರು ಹಂಚಿಕೆಗೆ ಬಹಿರಂಗ ಹರಾಜು ಪ್ರಕ್ರಿಯೆ ಕೈಗೊಳ್ಳಬೇಕು. ನಗರದ ಸ್ವಚ್ಛತೆಗೆ ಹೊಸ ಜೆಸಿಬಿ ವಾಹನ ನೀಡಬೇಕು. ಅಮೃತ ನಿರ್ಮಲನಗರ ಯೋಜನೆಯಡಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಪುರಸಭೆ ಆವರಣದಲ್ಲಿ ನಿರ್ವಿುಸಿರುವ ಹೈಟೆಕ್ ಕಾರಂಜಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಪುರಸಭೆ ಆಡಳಿತ ಪಕ್ಷದ ಸದಸ್ಯರೆಲ್ಲರೂ ಸೇರಿ, ‘ಕಾರಂಜಿ ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿದೆ. ನೀವೇ ಅದನ್ನು ಸರಿಯಾಗಿ ನೋಡಿರಲಿಕ್ಕಿಲ್ಲ’ ಎಂದು ಪ್ರತಿರೋಧ ವ್ಯಕ್ತಪಡಿದರು. ಆಗಸ್ಟ್ 15ರ ನಂತರ ಜಿಲ್ಲಾಧಿಕಾರಿ ಜತೆಗೆ ರ್ಚಚಿಸಿ ಹೊಸ ಜೆಸಿಬಿ ಖರೀದಿಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸೂಚಿಸುತ್ತೇನೆ. ಮಳಿಗೆಗಳ ಪುನರ್ ಹಂಚಿಕೆ ಕುರಿತು ಪುರಸಭೆ ಸದಸ್ಯರೆಲ್ಲರೂ ಒಮ್ಮತದ ತೀರ್ಮಾನ ಕೈಗೊಳ್ಳುವಂತೆ ಸಚಿವರು ಸಲಹೆ ನೀಡಿದರು.
2003ರಲ್ಲಿ ನಿರ್ವಿುಸಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ಕೆಟ್ಟು ಹೋಗಿದ್ದು, ದುರಸ್ತಿಗಾಗಿ 19.35 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಕುಡಿಯುವ ನೀರು ಪೂರೈಕೆಯಿಂದ ವಂಚಿತರಾಗಿರುವ ಪಟ್ಟಣದ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಸಲು 15 ಕೋಟಿ ರೂಪಾಯಿ ವೆಚ್ಚದಲ್ಲಿ 30 ಕಿಲೋ ಮೀಟರ್ ಪೈಪ್ಲೈನ್ ಅಳವಡಿಸಲಾಗುತ್ತಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ ಹೊಸಮನಿ ಸಭೆಗೆ ವಿವರಿಸಿದರು. ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಯಿಂದ ಪಟ್ಟಣದ ಯಾವುದೇ ರಸ್ತೆಗಳು ಹಾಳಾಗದಂತೆ ಕ್ರಮ ಕೈಗೊಳ್ಳಬೇಕು. ಹೊಸ ಬಡಾವಣೆ ನಿರ್ವಣಕ್ಕೆ ಸರ್ಕಾರದ ಎಲ್ಲ ನಿಯಮಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ ನೀಲನಕ್ಷೆ ಸಿದ್ಧಪಡಿಸಿಕೊಂಡು ವಿತರಿಸಬೇಕು. ನಗರದ ಹೃದಯ ಭಾಗದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಹೊಸ ವಿನ್ಯಾಸದೊಂದಿಗೆ ಅಭಿವೃದ್ಧಿಪಡಿಸಲು ಒಂದು ವಾರದೊಳಗೆ ವಿಶೇಷ ಸಭೆ ನಡೆಸಬೇಕು ಎಂದು ಸಚಿವರು ಸೂಚಿಸಿದರು.
ಸಭೆಯಲ್ಲಿ 13 ವಿಷಯಗಳ ಕುರಿತು ರ್ಚಚಿಸಲಾಯಿತು. ಇದರಲ್ಲಿ ಹೊಸ ಬಡಾವಣೆಗಳ ವಿನ್ಯಾಸ ನಕ್ಷೆಗಳಿಗೆ ಅನುಮೋದನೆ ನೀಡುವುದನ್ನು ಹೊರತುಪಡಿಸಿ ಇನ್ನುಳಿದ 12 ವಿವಿಧ ವಿಷಯಗಳಿಗೆ ಅನುಮೋದನೆ ನೀಡಲಾಯಿತು. ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ಎಸ್.ಬಿ. ಮರಿಗೌಡ್ರ, ಸಂಗಮೇಶ ಬ್ಯಾಳಿ, ಪುರಸಭೆಯ ಎಲ್ಲ ಸದಸ್ಯರು, ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಅಂಗನವಾಡಿಗಳಿಗೆ ಶಾಶ್ವತ ನಿವೇಶನ ಕಲ್ಪಿಸಿ: ಪಟ್ಟಣದಲ್ಲಿರುವ ಯಾವುದೇ ಅಂಗನವಾಡಿ ಕೇಂದ್ರಗಳು ದೇವಸ್ಥಾನ ಅಥವಾ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದರೆ ಪುರಸಭೆಯಿಂದ ಶಾಶ್ವತ ನಿವೇಶನ ಕಲ್ಪಿಸಿಕೊಡಬೇಕು. 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ವಿುಸಿಕೊಡಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ಅವರು ಸಿಡಿಪಿಒ ರೂಪಾ ಗಂಧದ ಅವರಿಗೆ ಸೂಚಿಸಿದರು.