

ಮಹಾಲಿಂಗಪುರ: ಪಟ್ಟಣದ ನಿರ್ಗತಿಕ ಅಜ್ಜಿಯ ಅಂತ್ಯಸಂಸ್ಕಾರವನ್ನು ಶುಕ್ರವಾರ ರಾತ್ರಿ ವಿಶ್ವ ಹಿಂದು ಪರಿಷತ್, ಬಜರಂಗ ದಳದ ಕಾರ್ಯಕರ್ತರು ನೆರವೇರಿಸಿ ಮಾನವೀಯತೆ ಮೆರೆದರು.
ಪಟ್ಟಣದ ನಿವಾಸಿ ನಿರ್ಗತಿಕ ವೃದ್ಧೆ ನೀಲವ್ವ ಕೆರೂರ ಅನಾರೋಗ್ಯದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅಜ್ಜಿಯ ಸಂಬಂಧಿಕರು ಯಾರೂ ಇಲ್ಲದ್ದನ್ನು ತಿಳಿದು ಪಟ್ಟಣದ ವಿಶ್ವ ಹಿಂದು ಪರಿಷತ್ ಬಜರಂಗದಳದ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಅಂತ್ಯ ಸಂಸ್ಕಾರಕ್ಕೆ ಬೇಕಾದ ಸಾಮಗ್ರಿಗಳನ್ನು ತಂದರು. ಪುರಸಭೆಯ ಮುಕ್ತಿ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಹಿಂದು ರುದ್ರಭೂಮಿಗೆ ಶವ ತಂದು ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನಡೆಸಿದರು. ಯುವಕರ ಈ ಸಾಮಾಜಿಕ ಸೇವಾ ಕಾರ್ಯಕ್ಕೆ ಪಟ್ಟಣದ ಹಿರಿಯರು, ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಚಿನ್ ಕಲ್ಮಡಿ, ರಾಘು ಪವಾರ, ಅಭಿ ಲಮಾಣಿ, ಸಂತೋಷ ಹಜಾರೆ, ಈರಣ್ಣ ಹುಣಶ್ಯಾಳ, ಸಚಿನ ವಂದಾಲ, ಶ್ರೀನಿಧಿ ಕುಲಕರ್ಣಿ, ಸಂಜು ಪವಾರ, ಮಹಾಲಿಂಗ ಕಲಾಲ, ಕೃಷ್ಣಾ ಕಳ್ಳಿಮನಿ, ಸಾಗರ ಭೋವಿ, ಆನಂದ ಬಂಡಿಗಣಿ, ಹಣಮಂತ ನಾವಿ, ಪುರಸಭೆ ಸದಸ್ಯ ರವಿ ಜವಳಗಿ, ಮಾಜಿ ಅಧ್ಯಕ್ಷ ಜಿ.ಎಸ್. ಗೊಂಬಿ, ಮಹಾದೇವ ಪುಕಾಳೆ, ಶಂಭುಲಿಂಗ ಬಡಿಗೇರ, ಗಂಗಪ್ಪ ಲಾತೂರ ಇತರರಿದ್ದರು.