

ಚಿತ್ರದುರ್ಗ: ಸಮಾಜದಲ್ಲಿ ಇಂದು ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ನಗರ ಸಮೀಪದ ಗೂಳಯ್ಯನಹಟ್ಟಿ ಮುರಾರ್ಜಿ ವಸತಿ ಶಾಲೆಯಲ್ಲಿ ಬುಧವಾರ ನಡೆದ‘ನಿತ್ಯಕಲ್ಯಾಣ’ಮನೆ ಮನೆಗೆ ಚಿಂತನ ಶ್ರಾವ ಣ ಕಾರ‌್ಯಕ್ರಮದಲ್ಲಿ ಶ್ರೀಗಳು ಮಾತನಾಡಿ,ಜೀವನ ಸುಂದರವಾಗುವುದು ಅಂತರಂಗದ ಸೌಂದರ್ಯದಿಂದ. ನಾವು ನಿರಂತರವಾಗಿ ಒಳಿ ತನ್ನು ಮಾಡಬೇಕು. ನಮಗೆ ಪ್ರಜ್ಞಾವಂತರು ಬೇಕಿದ್ದಾರೆ. ನಮ್ಮೊಳಗೆ ದೇವರನ್ನು ಕಾಣುವುದೇ ಬಸವತತ್ವವೆಂದು ಶ್ರೀಗಳು ಹೇಳಿದರು.
ಸಿದ್ದವ್ವನಹಳ್ಳಿ ವೀರೇಶ್ ಮಾತನಾಡಿ,ಮನುಷ್ಯನ ಬದುಕು ಬಾಹ್ಯಆಡಂಬರದಿಂದ ಕೂಡಿದೆ. ಮೌಲ್ಯಗಳ ಪತನವಾಗುತ್ತಿದೆ. ವಚನ ಕಾರರು ನಮಗೆ ಸಂಸ್ಕಾರದ ಕಣ್ಣುಗಳನ್ನು ಕೊಟ್ಟಿದ್ದಾರೆ. ಇತರರ ಬಗ್ಗೆ ಮಾತನಾಡುವುದನ್ನು ತೊರೆದು ನಮ್ಮನ್ನು ನಾವು ಅರಿತು ಕೊಳ್ಳ ಬೇಕಿದೆ ಎಂದರು.
ಪ್ರಾಂಶುಪಾಲ ಮಂಜುನಾಥರೆಡ್ಡಿ ಮಾತನಾಡಿ,ಇಂಥ ಸತ್ಸಂಗ ಕಾರ‌್ಯಕ್ರಮಗಳಲ್ಲಿ ಹೆಚ್ಚು,ಹೆಚ್ಚು ಭಾಗವಹಿಸಿದಾಗ ಸದ್ಗುಣಗಳ ಬೆಳವ ಣಿಗೆಗೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ನಿತ್ಯಜೀವನದಲ್ಲಿ ಒಳಿತನ್ನು ಮೈಗೂಡಿಸಿಕೊಂಡು ಬೆಳೆಯಬೇಕೆಂದರು. ಪಾವಗಡದ ರಾಮ ಮೂರ್ತಿ ಸ್ವಾಮೀಜಿ ಮಾತನಾಡಿದರು. ಗುತ್ತಿನಾಡು ಪ್ರಕಾಶ್,ಮುಖ್ಯಶಿಕ್ಷಕ ಮಲ್ಲಿಕಾರ್ಜುನ್ ಇದ್ದರು. ಲಕ್ಷ್ಮಿಸ್ವಾಗತಿಸಿ,ಜಗದೀಶ್ವರಿ ಹಿರೇ ಮಠ ನಿರೂಪಿಸಿದರು.