

ಸಿ.ಎ.ಮುರಳೀಧರ್ ಗೌರಿಬಿದನೂರು
ಕುಡುಮಲಕುಂಟೆ ಕೈಗಾರಿಕಾ ವಲಯದ ಅಭಿವೃದ್ಧಿಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿರುವುದು ರೈತರನ್ನು ಕಂಗಾಲಾಗಿಸಿದೆ, ಭೂಮಿ ನಂಬಿಕೊಂಡೇ ಇಷ್ಟು ದಿನ ಜೀವನ ನಡೆಸಿದ್ದೇವೆ, ನಮ್ಮನ್ನು ರೈತರಾಗಿರಲು ಬಿಡಿ ಎನ್ನುತ್ತಿದ್ದಾರೆ!
ಸರ್ಕಾರದಿಂದ 3ನೇ ಹಂತದ ಕೈಗಾರಿಕೆ ಅಭಿವೃದ್ಧಿಗೆ ದೊಡ್ಡಕುರುಗೋಡು, ಯರ್ರಹಳ್ಳಿ, ಗೌಡಸಂದ್ರ ವ್ಯಾಪ್ತಿಯ 836 ಎಕರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಕೆಲ ರೈತರು ಜಮೀನು ದಾಖಲೆಗಳಿಗಾಗಿ ವಿವಿಧ ಇಲಾಖೆಗಳ ಕಚೇರಿಗಳಿಗೆ ನಿತ್ಯ ಅಲೆದಾಡುತ್ತಿದ್ದಾರೆ, ಕೈಗಾರಿಕಾಭಿವೃದ್ಧಿಗೆ ಭೂಮಿ ನೀಡಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದಾರೆ.
ಈ ಭಾಗಕ್ಕೆ ಶ್ರೀದಲ್ಲೇ ಎಚ್.ಎನ್.ವ್ಯಾಲಿ ನೀರು ಬರಲಿದೆ. ಇದರಿಂದ ನಾವು ಕೃಷಿ ಮಾಡಿಕೊಂಡು ಬದುಕುತ್ತೇವೆ ಎನ್ನುತ್ತಿರುವ ರೈತರು, ಎರಡು ಹಂತಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಮಾಡಿರುವುದರಿಂದ 3ನೇ ಹಂತ ಇಲ್ಲಿ ಬೇಡ, ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ ಎಂದು ಅಲವತ್ತುಕೊಂಡಿದ್ದಾರೆ.
ಇನ್ನೊಂದೆಡೆ ಸರ್ಕಾರ ಎಕರೆಗೆ ಎಷ್ಟು ಪರಿಹಾರ ಎಂಬುದನ್ನು ೋಷಣೆ ಮಾಡ್ಲಿ. ಮೊದಲ ಹಂತದ ಕೈಗಾರಿಕೆ ಅಭಿವೃದ್ಧಿ ಸಂದರ್ಭದಲ್ಲಿ ಎಕರೆಗೆ 3.5 ಲಕ್ಷ ರೂ. ಹಾಗೂ 2ನೇ ಹಂತದಲ್ಲಿ 9 ಲಕ್ಷ ರೂ. ೋಷಣೆ ಮಾಡಿತ್ತು. ಭೂಮಿ ಬೆಲೆ ಗಗನಮುಖಿಯಾಗಿರುವ ಈ ದಿನಗಳಲ್ಲಿ ಸರ್ಕಾರ ನೀಡುವ ಬಿಡಿಗಾಸಿನ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದ್ದು, ಬೇರೆ ಜಮೀನು ಖರೀದಿಸುವ ಶಕ್ತಿಯೂ ರೈತರಲ್ಲಿ ಇ್ಲವಾಗಿದೆ.
ಸಂಬಂಧಗಳಿಗೆ ಕೊಳ್ಳಿ : ಅನೇಕ ರೈತರಿಗೆ ಸರ್ಕಾರದಿಂದ ಸಾಗುವಳಿ ಚೀಟಿ ಮಂಜೂರಾಗಿದ್ದರೂ ಹಿರಿಯರಿಂದ ಹಕ್ಕು ವರ್ಗಾವಣೆ, ಖಾತೆ, ಪಹಣಿ ಮಾಡಿಸಿಲ್ಲ. ಇನ್ನೂ ಕೆಲ ರೈತರು ಸಾಗುವಳಿ ಚೀಟಿಗೆ ಅರ್ಜಿ ಹಾಕಿದ್ದರೂ ಮಂಜೂರಾಗ್ಲಿ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಇರುವುದರಿಂದ ಹೆಣ್ಣುಮಕ್ಕಳು ಜಮೀನುಗಳ ಮೇಲೆ ಹಕ್ಕು ಸಾಧಿಸಲು ಮುಂದಾಗಿರುವುದು ಸಂಬಂಧಗಳಿಗೆ ಕೊಳ್ಳಿ ಇಡಲಾರಂಭಿಸಿದೆ.
ದಾಖಲೆ ಪಡೆಯಲು ರೈತರಿಗೆ ನೆರವು : ಸಾಗುವಳಿ ಚೀಟಿ ಪಡೆದಿರುವ ರೈತ ಕುಟುಂಬಗಳಿಗೆ ಹಕ್ಕು ವರ್ಗಾವಣೆ ಆಗದಿದ್ದರೂ, ವಾರಸುದಾರರಿಗೆ ಹಣ ವರ್ಗಾವಣೆ ಮಾಡಲಾಗುವುದು. ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿರುವವರಿಗೆ ಅನುಮೋದನೆ ಆದರೆ ಮಾತ್ರ ಹಣ ನೀಡಲಾಗುವುದು. ಇ್ಲವಾದರೆ ಸರ್ಕಾರ ಸದರಿ ಜಮೀನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ದಾಖಲೆ ಪಡೆಯಲು ರೈತರಿಗೆ ಅಗತ್ಯ ನೆರವು ನೀಡಲಾಗುತ್ತದೆ ಎಂದು ಐಡಿಬಿ ಭೂಸ್ವಾಧೀನ ಅಧಿಕಾರಿ ಬಿ. ವೆಂಕಟೇಶ್ ತಿಳಿಸಿದ್ದಾರೆ.