ನಮ್ಮದು ಮೋದಿ ಸಂಸ್ಕೃತಿ ಎಂದ ಸಿಎಂ ಬೊಮ್ಮಾಯಿ

Basavaraj_Bommai
Published on

ಹುಬ್ಬಳ್ಳಿ : ಶಿವಮೊಗ್ಗ, ಬೆಳಗಾವಿ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಗೆ ಯಾರ ಹೆಸರು ಇಡಬೇಕೆನ್ನುವ ತೀರ್ಮಾನವನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಅಲ್ಲಿನ ಜನರು ಯಡಿಯೂರಪ್ಪ ಹೆಸರು ಇಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮತ್ತೊಮ್ಮೆ ಬಿಎಸ್​ವೈ ಅವರೊಂದಿಗೆ ರ್ಚಚಿಸಲಾಗುವುದು ಎಂದರು.

ಕಾಂಗ್ರೆಸ್ಸಿಗರದ್ದು ಟಿಪು್ಪ ಸಂಸ್ಕೃತಿ, ನಮ್ಮದು ನಾಲ್ವಡಿ ಕೃಷ್ಣರಾಜರ ಸಂಸ್ಕೃತಿ ಎಂಬ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಯಾರ ಸಂಸ್ಕೃತಿ ಯಾರದ್ದು ಎಂಬುದು ಜನರಿಗೆ ಗೊತ್ತಿದೆ. ನನ್ನ ಪ್ರಕಾರ ನಮ್ಮದು ನರೇಂದ್ರ ಮೋದಿ ಸಂಸ್ಕೃತಿ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಸಶ್ತಕ, ಸಮೃದ್ಧವಾಗಿಸಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರು ಅಮೃತ ಕಾಲವನ್ನು ಕರ್ತವ್ಯ ಕಾಲವೆಂದು ಹೇಳಿದ್ದಾರೆ. ಕರ್ತವ್ಯದ ಮೂಲಕ ಇಡಿ ದೇಶವನ್ನು ಸರ್ವಶ್ರೇಷ್ಠವನ್ನಾಗಿಸಲು ಹೊರಟಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net