

ಹಾಸನ: ಕೆ.ಎಸ್.ಆ.ರ್.ಟಿ.ಸಿ. ಬಸ್ ನಿಲ್ದಾಣದ ಒಳಗೆ ಪರಿಶೀಲಿಸಿ ಬಸ್ ಒಳಗಿಂದ ಹೊರ ಬಂದಾಗ ವ್ಯಕ್ತಿ ಓರ್ವ ಉಚಿತ ಬಸ್ ಪ್ರಯಾಣದ ಬಗ್ಗೆ ಪ್ರಶ್ನೆ ಮಾಡಿದರು. ಕಾಂಗ್ರೆಸ್ ಸರ್ಕಾರದ ಈ ಮಹಿಳಾ ಶಕ್ತಿ ಯೋಜನೆಯಿಂದ ನಮ್ಮ ಮನೆಯಲ್ಲಿ ಹೆಂಗಸರು ಮನೆಗೆ ಬರ್ತಿಲ್ಲ. ವರ್ಷದಲ್ಲಿ ಆರು ತಿಂಗಳು ದೇವಸ್ಥಾನಕ್ಕೆ ಹೋಗುತ್ತಿರುವುದರಿಂದ ನಮಗೆ ಕಷ್ಟವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಗೆ ಪ್ರಶ್ನೆ ಮಾಡಿದ ಪ್ರಸಂಗ ಎದುರಾಯಿತು.
ನೀವು ಉಚಿತ ಬಸ್ ಪ್ರಯಾಣ ನೀಡಿದ ಪರಿಣಾಮ ಮನೆಯಲ್ಲಿ ಮಹಿಳೆಯರು ಇರುತ್ತಿಲ್ಲ. ವರ್ಷದ ಆರು ತಿಂಗಳು ಊರೂರು ಸುತ್ತುತ್ತಿದ್ದಾರೆ. ಮನೆ ಕೆಲಸ ಮಾಡುವವರಿಲ್ಲ. ತಿಂಗಳಿಗೆ ಎರಡು ದಿನ ಮಾತ್ರ ಮನೆಗೆ ಬರುತ್ತಿದ್ದಾರೆ. ಮನೆ ಕೆಲಸ ಮಾಡುವವರು ಯಾರು? ಎಂದು ಪ್ರಶ್ನಿಸಿದಾಗ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಉತ್ತರಿಸಿ, ದೇವಸ್ಥಾನಕ್ಕೆ ಹೋಗಲಿ ಬಿಡಿ, ಇಷ್ಟು ದಿವಸ ಮಹಿಳೆಯರು ಕೆಲಸ ಮಾಡಿದ್ದಾರೆ. ಈಗ ನಿಮ್ಮ ಕೆಲಸ ನೀವು ಕೆಲಸ ಮಾಡಿ ಎಂದರು.