ನಮ್ಮ ಹಣೆಬರಹಕ್ಕೆ ನಾವೇ ಕಾರಣರು

15BK2
 ಬಸವಕಲ್ಯಾಣ ತಾಲೂಕಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅನುಭಾವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರೊ.ಆರ್.ಕೆ.ಹುಡಗಿ ಮಾತನಾಡಿರು. ಪ್ರಾಚಾರ್ಯ ಡಾ.ಭಾವನಾ ಋಷಿ, ಜಗದೀಶ ಬಿರಾದಾರ, ಆಶೋಕ ಕಟ್ಟಿಮನಿ ಇತರರಿದ್ದರು.
Published on

ಬಸವಕಲ್ಯಾಣ: ಪರಿಶ್ರದಿಂದ ಅಭ್ಯಾಸ ಮಾಡುವ, ಪ್ರಯತ್ನಶೀಲರಾಗುವ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂದು ಚಿಂತಕ ಪ್ರೊ.ಆರ್.ಕೆ.ಹುಡಗಿ ಹೇಳಿದರು.

ತಾಲೂಕಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅನುಭಾವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹಣೆ ಬರಹವನ್ನು ನಾವೇ ಬರೆಯಬೇಕು. ನಾಳಿನ ಭವಿಷ್ಯವನ್ನು ನಾವು ಇಂದಿನ ಕರ್ಮದ ಮೂಲಕ ಬೇಕಾದ ಹಾಗೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾನು ೧೦ನೇ ತರಗತಿಯಲ್ಲಿ ಯಾವ ವಿಷಯದಲ್ಲಿ ನನಗೆ ಹಿನ್ನಡೆಯಾಗಿತ್ತೋ, ಅದನ್ನೇ ಸವಾಲಾಗಿ ಸ್ವೀಕರಿಸಿ, ಅದೇ ವಿಷಯವನ್ನು ಮುಖ್ಯ ವಿಷಯವನ್ನಾಗಿ ಓದಿ ಪ್ರೋಫೆಸರ್ ಆದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡು, ಶ್ರಮ ವಹಿಸಿ ಅಭ್ಯಾಸ ಮಾಡಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಯದ ಪ್ರಾಚಾರ್ಯ ಡಾ.ಭಾವನಾ ಋಷಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಓದುವುದರ ಮೂಲಕ ತಮ್ಮ ಬದುಕನ್ನು ಭವ್ಯವಾಗಿ ರೂಪಿಸಿಕೊಳ್ಳಬಹುದು. ಸಂಸ್ಕಾರತವಾಗಿ, ಸೌಜನ್ಯಶೀಲರಾಗಿ, ಸುಪ್ರಜೆಗಳಾಗಿ, ಸಮಾಜದ ಆಸ್ತಿಯಾಗಬೇಕು ಎಂದು ಹೇಳಿದರು.

ಧರ್ಮಣ್ಣ ಚಿಟ್ಟಾ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಲಕ್ಷ್ಮೀಕಾಂತ ದುದ್ದಣಿಗಿ ವಂದಿಸಿದರು. ಕೆ. ಹನುಮಂತಪ್ಪ ನಿರೂಪಣೆ ಮಾಡಿದರು. ನಯನ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಪಾಲಕರಾದ ಜಗದೀಶ ಬಿರಾದಾರ, ಸುರೇಂದ್ರ, ರಜನೀಶ, ರತ್ನೇಶ ತ್ರಿಪಾಠಿ , ಕು. ಸೌಮ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net