ನಮ್ಮ ವಿದ್ಯಾರ್ಥಿಗಳು ಕೀರ್ತಿವಂತರಾಗಲಿ

2
ಗೂರನವರ, ಎ.ಎಸ್​.ಒಳಕೇರಿ, ಜನತಾ ಶಿಣ ಪ್ರಸಾರ ಸಮಿತಿ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಟಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮಕ್ಕೆ ಹಳೆಯ ವಿದ್ಯಾರ್ಥಿಗಳು ಶಿಕ್ಷಕರನ್ನು ಬರಮಾಡಿಕೊಂಡರು. ಕೆ.ಬಿ.ನಾವಲಗಟ್ಟಿ , ವಿಜಯಕುಮಾರ ಸಾಣಿಕೊಪ್ಪ , ಬಸವಂತಪ್ಪ ಬೆಣಚಮರಡಿ, ಸಿ.ಬಿ.ಲಂಗೋಟಿ ಇತರರಿದ್ದರು.
Published on

ಇಟಗಿ: ನಮ್ಮ ವಿದ್ಯಾರ್ಥಿಗಳು ಶಿಣ, ರಾಜಕೀಯ, ವಿವಿಧ ಸಂಟನೆ, ಪತ್ರಿಕಾ ರಂಗ ಸೇರಿ ಬೇರೆ ೇತ್ರಗಳಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದರೆ ಗುರುಗಳಿಗೆ ಹೆಮ್ಮೆ ಎಂದು ನಿವೃತ್ತ ಸಹಶಿಕ ಕೆ.ಬಿ.ನಾವಲಗಟ್ಟಿ ಹೇಳಿದರು.

ಗ್ರಾಮದ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 1993ನೇ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಂದ ಸೋಮವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ಜನತಾ ಶಿಣ ಪ್ರಸಾರ ಸಮಿತಿ ಅಧ್ಯ ವಿಜಯಕುಮಾರ ಸಾಣಿಕೊಪ್ಪ ಅಧ್ಯತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯ ಬಸವಂತಪ್ಪ ಬೆಣಚಮರಡಿ ಉದ್ಘಾಟಿಸಿದರು. ನಿವೃತ್ತ ಗುರುಗಳಾದ ಸಿ.ಬಿ.ಲಂಗೋಟಿ, ಸಿ.ಆರ್​.ಪಾಟೀಲ, ಕೆ.ಎಸ್​.ಕುರಗುಂದ, ಎಂ.ಎಸ್​.ಪೂಜಾರ, ಗುರುಗಳಾದ ಎಸ್​.ಎಂ.ತುರಮರಿ, ಬಿ.ಬಿ.ಕಾದ್ರೊಳ್ಳಿ, ವಿ.ವಿ.ಬಡಿಗೇರ, ಪ್ರಾಚಾರ್ಯ ಎಸ್​.ಎಸ್​.ಶಾಸ್ತ್ರಿ, ಕೀರ ಗೂರನವರ, ಎ.ಎಸ್​.ಒಳಕೇರಿ, ಜನತಾ ಶಿಣ ಪ್ರಸಾರ ಸಮಿತಿ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net