ನಮ್ಮ ರಕ್ಷಾ ಕವಚಗಳಾಗಿವೆ ಕಾನೂನುಗಳು

09 SIRAGUPPA 01
Published on

ಸಿರಗುಪ್ಪ: ಸಂಚಾರ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಹೆಲ್ಮೆಟ್ ಹಾಕುವುದು ಕಡ್ಡಾಯವಾಗಿದೆ. ಕಾನೂನುಗಳು ನಮ್ಮೆಲ್ಲರ ರಕ್ಷಾ ಕವಚವಾಗಿವೆ ಎಂದು ಪ್ರಭಾರ ಡಿವೈಎಸ್ಪಿ ಸಂತೋಷ್ ಚವ್ಹಾಣ್ ಹೇಳಿದರು.

ಪಟ್ಟಣದ ಠಾಣೆಯಲ್ಲಿ ಹಚ್ಚೊಳ್ಳಿ, ಸಿರಿಗೇರಿ, ತೆಕ್ಕಲಕೋಟೆ ಠಾಣೆ ಸಹಯೋಗದಲ್ಲಿ ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಸೋಮವಾರ ಮಾತನಾಡಿದರು. ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ವಾಹನ ಚಲಾಯಿಸುವುದರಿಂದ ಪ್ರಾಣ ಹಾನಿಯಾಗುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಡೆಯಲು ಸಾಧ್ಯ. ಅಪಘಾತದ ಸಂದರ್ಭದಲ್ಲಿ ತಲೆಗೆ ಗಾಯವಾಗದಂತೆ ತಡೆಗಟ್ಟಲು ಹೆಲ್ಮೆಟ್ ಸಹಾಯ ಮಾಡುತ್ತದೆ. ಹೆಲ್ಮೆಟ್ ಧರಿಸುವುದು ಕಡ್ಡಾಯ ನಿಯಮವಾಗಿದ್ದು, ಎಲ್ಲರೂ ಪಾಲಿಸಬೇಕೆಂದು ಸಲಹೆ ನೀಡಿದರು.

ಕನಕದಾಸ ವೃತ್ತ, ಬಳ್ಳಾರಿ ರಸ್ತೆ, ತಾಲೂಕು ಮೈದಾನ ರಸ್ತೆ, ವಾಲ್ಮೀಕಿ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಾಬು ಜಗಜೀವನರಾಮ್ ರಸ್ತೆ, ಟಿಪ್ಪು ಸುಲ್ತಾನ್ ವೃತ್ತ, ಗಾಂಧಿ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ, ಕೊರಂನಹಳ್ಳ, ಸಿಂಧನೂರು ಬೈಪಾಸ್ ರಸ್ತೆ ಮೂಲಕ ಆದೋನಿ ರಸ್ತೆವರೆಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net