

ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾ ಸಂಸ್ಥೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನವನ್ನು ಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯ ಕುಮಾರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಿಕ್ಷಕ ಎಸ್.ಎಂ.ಪೃಥ್ವಿರಾಜ್ ಅವರು,ಪ್ರಸಕ್ತ ಸಾಲಿನ ವಿಶ್ವ ಪರಿಸರ ದಿನಾಚರಣೆ ಘೋಷಣೆ‘ನಮ್ಮ ಭೂಮಿ,ಭೂಮಿ ಮರುಸ್ಥಾಪನೆ,ಮರುಭೂಮಿ,ಮತ್ತು ಬರ ಸ್ಥಿತಿ ಸ್ಥಾಪಕತ್ವ’ವನ್ನು ಒಳಗೊಂಡಿದೆೆ. ಕಲುಷಿತ ಪರಿಸರ ವಿಂದು ನಾನಾ ಸಂಕಷ್ಟಗಳನ್ನು ತಂದೊಡ್ಡುತ್ತಿದ್ದು,ಪರಿಸರ ರಕ್ಷಣೆಯ ಕಡೆಗೆ ತುರ್ತಾಗಿ ಗಮನ ಹರಿಸಬೇಕಿದೆ.
ಪರಿಸರ ರಕ್ಷಣೆಯ ಸವಾಲನ್ನು ಸಮರ್ಥವಾಗಿ ಎದುರಿಸಬೇಕಿದೆ. ಈ ನಿಟ್ಟಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ಕಾಡಿನ ನಾಶ ತಡೆ ಗಟ್ಟುವ ಮೂಲಕ ಜೀವ ವೈವಿಧ್ಯತೆ ಸಂರಕ್ಷಣೆ,ಹವಾಮಾನದಲ್ಲಿ ಉಂಟಾಗುತ್ತಿರುವ ಏರಿಳಿತವನ್ನು ನಿಯಂತ್ರಣ ಸಾಧ್ಯವಾಗಲಿದೆ ಎಂದ ರು. ಸಂಸ್ಥೆ ನಿರ್ದೇಶಕ ಎಸ್.ಎಂ.ಪೃಥ್ವೀಶ್,ಐಸಿಎಸ್‌ಸಿ ಪ್ರಾಂಶುಪಾಲ ಪಿ.ಬಸವರಾಜಯ್ಯ,ಮುಖ್ಯಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ ಇದ್ದರು. ಶಿಕ್ಷಕಿ ಜ್ಯೋತಿ ಪ್ರಾರ್ಥಿಸಿದರು. ಶಿಕ್ಷಕಿ ಸಿ.ಚೈತ್ರಾ ನಿರೂಪಿಸಿದರು.