

ಸೇಡಂ: ಮುAಬರುವ 2025ರಲ್ಲಿ ನಡೆಯಲಿರುವ ಐತಿಹಾಸಿಕ ಭಾರತೀಯ ಸಂಸ್ಕೃತಿ ಉತ್ಸವದಿಂದ ರಾಷ್ಟçಕೂಟರ ನಾಡು ವಿಶ್ವಪ್ರಖ್ಯಾತಿ ಪಡೆಯಲಿದ್ದು, ಅಂತಹ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಭಾರತೀಯ ಸಂಸ್ಕೃತಿ ಉತ್ಸವದ ಪ್ರಧಾನ ಸಂಯೋಜಕ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ ಹೇಳಿದರು.
ನೃಪತುಂಗ ಕಾಲೇಜು ಆವರಣದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿಯಿಂದ ಭಾರತೀಯ ಸಂಸ್ಕೃತಿ ಉತ್ಸವ-7 ಹಾಗೂ ಕೊತ್ತಲ ಸ್ವರ್ಣ ಕಾರ್ಯಕ್ರಮದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, 9 ದಿನ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾದವರಿಗೆ ಸರಿಸುಮಾರು 100 ಪಿಎಚ್.ಡಿ ಪದವಿ ಪಡೆದಷ್ಟು ಜ್ಞಾನ ಸಿಗಲಿದೆ ಎಂದು ತಿಳಿಸಿದರು.
ಜಗತ್ತಿಗೆ ಸಂಸತ್ ಪರಿಚಯಿಸಿದ ನಾಡು ನಮ್ಮದು, ವಿಶ್ವದ ಶಕ್ತಿಶಾಲಿ ದೇವರಾದ ಹನುಮಂತ ಜನಿಸಿದ ಪುಣ್ಯ ಭೂಮಿ ಕಲ್ಯಾಣ ಕರ್ನಾಟಕ, ಅಮೋಘವರ್ಷ ನೃಪತುಂಗ ಆಳ್ವಿಕೆಯ ಇತಿಹಾಸದ ನೆಲ ನಮ್ಮದು.. ಹೀಗೆ ಸಾಕಷ್ಟು ಹಿರಿಮೆ ಹೊಂದಿದ್ದರೂ ನಮ್ಮ ಭಾಗವನ್ನು ಹಿಂದುಳಿದಿದೆ ಎಂದು ಕರೆಯಲ್ಪಡಲಾಗುತ್ತಿತ್ತು. 21 ವರ್ಷಗಳ ನಿರಂತರ ಪ್ರಯತ್ನದಿಂದ ಹಿಂದುಳಿದಿದೆ ಎನ್ನುವ ಹಣೆಪಟ್ಟಿ ಕಳಚಿದೆ ಎಂದರು.
ನಿತ್ಯ ಒಂದೊAದು ಕ್ಷೇತ್ರದಲ್ಲಿ ಪ್ರಸಿದ್ಧಿ ಹೊಂದಿದ ಗಣ್ಯರು ಭಾಗಿಯಾಗಲಿದ್ದಾರೆ. ಕೇಂದ್ರ ಸರ್ಕಾರದ ಐವರು ಸಚಿವರು, ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಜಗತ್ತಿನ ನಾನಾ ಭಾಗಗಳಲ್ಲಿನ ಭಾರತದ ಮೇಲೆ ಪ್ರೀತಿ ಹೊಂದಿದ ಗಣ್ಯವ್ಯಕ್ತಿಗಳು ಹಾಗೂ 50ಕ್ಕೂ ಅಧಿಕ ಪದ್ಮ ಪ್ರಶಸ್ತಿ ಪುರಸ್ಕೃತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ಭಾರತ ವಿಕಾಸ ಸಂಗಮ ಸಂಸ್ಥಾಪಕ ಕೆ.ಎನ್.ಗೋವಿಂದಾಚಾರ್ಯ ಮಾತನಾಡಿದರು.
ಓಡಿಸ್ಸಾದ ಶ್ರೀ ಭಾಸ್ಕರತೀರ್ಥ ದಂಡೇಶ್ವರ ಸ್ವಾಮೀಜಿ, ಕನ್ಹೇರಿ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಶ್ರೀ ಶಿವಶರಣಾನಂದ ಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ, ವಂದೇ ಮಾತರಂ ಫೌಂಡೇಷನ್ ಸಂಸ್ಥಾಪಕ ಮಾಧವರೆಡ್ಡಿ ಇತರರಿದ್ದರು.
ಕಲಾವಿದರಾದ ವೀರೇಶ ಹೂಗಾರ, ವೀರೇಂದ್ರ ಭಂಟನಳ್ಳಿ ಪ್ರಾರ್ಥಿಸಿದರು. ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಭಾರತೀಯ ಸಂಸ್ಥೆಯ ಕಾರ್ಯದರ್ಶಿ ಅನುರಾಧಾ ಪಾಟೀಲ್ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಜಗದೀಶ ಕಡಬಗಾಂವ್ ನಿರೂಪಣೆ ಮಾಡಿ, ವಂದಿಸಿದರು.