ನಮ್ಮ ಜನರಿಗಾಗಿ ನಾನು ಸದಾ ಸೇವೆ ಸಲ್ಲಿಸುವೆ

Cricket Player, Rajeshwari Gaikwad, Birthday, Jumanala, Old Age Home,
ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಅನಾಥ ಮಕ್ಕಳೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಂಡರು.
Published on

ವಿಜಯಪುರ: ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ತಮ್ಮ ಜನ್ಮದಿನವನ್ನು ಸಮಾಜ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ತಾಲೂಕಿನ ಜುಮನಾಳದಲ್ಲಿರುವ ಶ್ರೀ ಸಿದ್ಧೇಶ್ವರ ವಿದ್ಯಾಪೀಠ ಮತ್ತು ಸಿದ್ದಮ್ಮ ಬ್ಯಾಕೋಡ ವೃದ್ಧಾಶ್ರಮಕ್ಕೆ ಶನಿವಾರ ಬೇಟಿ ನೀಡಿದ ಅವರು, ಅಲ್ಲಿನ ವೃದ್ಧರೊಂದಿಗೆ ಬೆರೆತು ಅವರ ಕಷ್ಟ-ಸುಖ ಆಲಿಸಿ ಅವರಿಗೆ ಹೊದಿಕೆ ಹಾಗೂ ಮತ್ತಿತರರ ಅವಶ್ಯಕ ಪರಿಕರಗಳನ್ನು ವಿತರಿಸಿದರು. ಅಲ್ಲಿನ ಅನಾಥ ಮಕ್ಕಳೊಂದಿಗೂ ಕೇಕ್ ಕತ್ತರಿಸಿ ಸಂಭ್ರಮಿಸಿದರು. ನಂತರ ಅವರಿಗೆಲ್ಲ ಭೋಜನ ಉಣಬಡಿಸಿದರು.

ರಾಜೇಶ್ವರಿ ಗಾಯಕವಾಡ ಮಾತನಾಡಿ, ಜನತೆಯ ಪ್ರೀತಿ, ಹಾರೈಕೆಯ ಫಲವಾಗಿಯೇ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದೇನೆ. ನನ್ನ ತಂದೆ ಹೇಳಿದಂತೆ ಗುರು-ಹಿರಿಯರು, ಬಡವರು, ವೃದ್ಧರನ್ನು ದೇವರಂತೆ ಕಾಣುತ್ತಿದ್ದೇನೆ. ಸಮಾಜ ನಮಗೆ ಎಲ್ಲವೂ ನೀಡಿದೆ. ಸಮಾಜಕ್ಕಾಗಿ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ ಕೂಡ ಹೌದು. ನಮ್ಮ ಜನರಿಗಾಗಿ ನಾನು ಸದಾ ಸೇವೆ ಸಲ್ಲಿಸುವೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ಶರಣಗೌಡ ಬಿರಾದಾರ, ಮುತ್ತಣ್ಣ ದೇಸಾಯಿ, ಪೂಜಾ ವಾಡಲಗಿ, ರಾಜು ಮೇಲಿನಮನಿ, ವಿಶ್ವನಾಥ ಗಾಯಕವಾಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net