

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಹೊನ್ನಗಂಗಯ್ಯನಪಾಳ್ಯದ ಟೀಚರ್ಸ್ ಬಡಾವಣೆ ಯಲ್ಲಿರುವ ನಮ್ಮ ಕ್ಲಿನಿಕ್‌ಗೆ ವೈದ್ಯರನ್ನು ನಿಯೋಜಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.
‘ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರೇ ಇಲ್ಲ’ ಶೀರ್ಷಿಕೆಯಡಿ ಸೆ.16ರಂದು ವಿಜಯವಾಣಿ ಪ್ರಕಟಿಸಿದ್ದ ಸಮಗ್ರ ವರದಿಗೆ ಸ್ಪಂದಿರುವ ಆರೋಗ್ಯ ಇಲಾಖೆ ವೈದ್ಯೆಯನ್ನು ನಿಯೋಜಿಸಿದೆ. 6 ತಿಂಗಳಿಂದ ವೈದ್ಯರನ್ನು ನಿಯೋಜಿಸದೆ ಸಿಬ್ಬಂದಿಯೇ ಚಿಕಿತ್ಸೆ ನೀಡುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಸಾಕಷ್ಟು ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿತ್ತು.
ವೈದ್ಯರನ್ನು ನಿಯೋಜನೆ ಮಾಡಿದಂತೆ ನಮ್ಮ ಕ್ಲಿನಿಕ್‌ಗೆ ಸೂಚನಾ ಫಲಕ ಅಳವಡಿಸಿದರೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲ ಅಗುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.
ದಾಬಸ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆಯನ್ನು ನಿಯೋಜನೆ ಮಾಡಲಾಗಿದೆ. ಜತೆಗೆ ಸೂಚನಾ ನಾಮಫಲಕ ಅಳವಡಿಕೆ ಕುರಿತು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.ಡಾ.ಯೋಗೀಶ್ ತಾಲೂಕು ಆರೋಗ್ಯಾಧಿಕಾರಿ