ನಮ್ಮ ಆಹಾರ ಪದ್ಧತಿಯಲ್ಲೇ ಇದೆ ಚಿಕಿತ್ಸೆ

25 ckm 6
ಕಲ್ಯಾಣ ನಗರದ ಬಸವಮಂದಿರದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ ಆಯೋಜಿಸಿದ್ದ ಮನೆಮದ್ದು ಕಾರ್ಯಾಗಾರವನ್ನು ಆಯುರ್ವೇದ ತಜ್ಞ ಮೈಸೂರಿನ ಡಾ. ಚಂದ್ರಶೇಖರ್ ಉದ್ಘಾಟಿಸಿದರು. ಆಶಾ ಮಲ್ಲೇಶ್, ಡಾ.ಶ್ರೀಧರ್, ಡಾ.ಶಿವರಾಜ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಮ್ಮ ಆಹಾರ ಪದ್ಧತಿಯಲ್ಲೆ ಬಹುತೇಕ ಕಾಯಿಲೆಗಳನ್ನು ದೂರವಾಗಿಸಿಕೊಳ್ಳಬಹುದು ಎಂದು ಆಯುರ್ವೇದ ತಜ್ಞ ಮೈಸೂರಿನ ಡಾ. ಚಂದ್ರಶೇಖರ್ ತಿಳಿಸಿದರು.

ನಗರದ ಕಲ್ಯಾಣ ನಗರದ ಬಸವಮಂದಿರದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ ಆಯೋಜಿಸಿದ್ದ ಮನೆಮದ್ದು ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾರತೀಯ ಆಹಾರ ಪದ್ಧತಿಯಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಸಂಗತಿಗಳು ಯಥೇಚ್ಛವಾಗಿವೆ. ಮನೆಯಂಗಳದಲ್ಲಿ ಬೆಳೆಯುವ ಎಲೆ, ಹೂವು, ಹಣ್ಣು, ಗಡ್ಡೆ, ಕಾಯಿ, ಕಾಂಡವನ್ನು ಬಳಸಿಕೊಂಡು ನಮ್ಮನ್ನು ಕಾಡುವ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದರು.

ಪಡಸಾಲೆಯಲ್ಲಿರುವ ಸಸ್ಯಜನ್ಯದಿಂದ ರಕ್ತದೊತ್ತಡ, ಸಕ್ಕರೆಕಾಯಿಲೆ ಸೇರಿದಂತೆ ಅನೇಕ ದೀರ್ಘಕಾಲೀನ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು. ನಮ್ಮ ಹಿರಿಯರು ಆರೋಗ್ಯ ಕಾಳಜಿಯನ್ನು ಹೊಂದಿದ್ದು, ನಿರಂತರವಾಗಿ ಸೇವಿಸುವ ಆಹಾರದಲ್ಲೆ ಅನೇಕ ಕಾಯಿಲೆಗಳಿಗೆ ಪರಿಹಾರ ಕಂಡುಕೊAಡಿದ್ದರು. ಆಯುರ್ವೇದ ಶಾಸ್ತçದಲ್ಲಿ ಒಂದೇ ವಸ್ತುವಿನಿಂದ ವಿವಿಧ ಕಾಯಿಲೆಗಳನ್ನು ದೂರಮಾಡಬಹುದು ಎಂದು ಹೇಳಿದರು.

ಅಡುಗೆ ಮನೆಯಲ್ಲಿರÀÄವ ಇಂಗು, ಶುಂಠಿ, ಅರಿಸಿನ, ಬದನೆ, ಮೆಣಸು, ನೆಲ್ಲಿ, ಹಾಗಲ, ನಿಂಬೆ, ಕರ್ಜೂರ, ಕರಿಬೇವು, ತೆಂಗು, ತುಳಸಿ, ಗರಿಕೆ, ಒಂದಲಗ, ಅಮೃತಬಳ್ಳಿ, ದೊಡ್ಡಪತ್ರೆ... ಮತ್ತಿತರ ಸಾಮಾನ್ಯ ಮೂಲಿಕೆಗಳಿಂದ ಕೆಲವು ಕಾಯಿಲೆ ದೂರವಾಗಿಸಬಹುದು. ಇಂಗು ತುಪ್ಪದಲ್ಲಿ ಉರಿದು ಕಡ್ಲೆಕಾಳಿನಷ್ಟು ಸೇವಿಸಿದರೆ ಮೈಗ್ರೇನ್ ದೂರವಾಗುವುದು. ಬದನೆಕಾಯಿ ಸಣ್ಣದಾಗಿ ಹೆಚ್ಚಿ ಒಂದು ಲೋಟ ನೀರಿನಲ್ಲಿ ಕಿವುಚಿ ಕುಡಿದರೆ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣುವ ರಕ್ತಸ್ರಾವ ತಕ್ಷಣ ನಿಲ್ಲಿಸಬಹುದು. ಕೊತ್ತಂಬರಿಕಟ್ಟನ್ನು ಚೆನ್ನಾಗಿ ಜಗಿದು ತಿಂದರೆ ಹುಳಿತೇಗು, ಎದೆಯುರಿ, ಹೊಟ್ಟೆಉರಿ ಸೇರಿದಂತೆ ಗ್ಯಾಸ್ಟಿçಕ್ ತೊಂದರೆಯನ್ನು ತತ್‌ಕ್ಷಣದಲ್ಲಿ ನಿವಾರಿಸಬಹುದು ಎಂದು ಮಾಹಿತಿ ನೀಡಿದರು.

ತಗ್ಗಿಗಿಡದ ಎಲೆರಸ ತೆಗೆದು ೨೫೦ ಮಿ.ಗ್ರಾಂ. ಶಿಲಾಜಿತುವನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ತಿಂಗಳಲ್ಲಿ ತೂಕ ಕಡಿಮೆ ಮಾಡಬಹುದು. ಹೊಮ್ಮುಗಳ ಬೇರಿನ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ಕಡಿತ, ಹುಳುಕು ಹಲ್ಲು ತೊಂದರೆ ನಿವಾರಿಸಬಹುದು. ಅಗಸೆ ಎಲೆ ರಸಕ್ಕೆ ಒಂದು ಕಾಳುಮೆಣಸು, ಎರಡು ತೊಟ್ಟು ಗೋಮೂತ್ರ ಸೇರಿಸಿ ನಶೆ ಮಾಡಿಸುವುದರಿಂದ ಮೂರ್ಛೆ ರೋಗ ನಿವಾರಣೆಯಾಗುತ್ತದೆ ಎಂದರು.

ಮೂಲವ್ಯಾಧಿ ತೊಂದರೆಗೆ ರಕ್ತಸ್ರಾವವಿದ್ದರೆ ಸೀಬೆ ಎಲೆಯನ್ನು ಬಿಸಿಮಾಡಿ ಮೊಸರಲ್ಲಿ ಅರೆದು ಖಾಲಿಹೊಟ್ಟೆಯಲ್ಲಿ ಒಂದುವಾರ ತಿನ್ನಬೇಕು. ದಾಸವಾಳದ ನಾಲ್ಕು ಎಲೆಗಳನ್ನು ಒಂದು ವಾರ ನಿತ್ಯ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ೧೦ಗ್ರಾಂ ಕರಿಎಳ್ಳನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಹತ್ತುದಿನ ಸೇವಿಸಿ ೪ ಚಮಚ ಬೆಣ್ಣೆ ಸೇವಿಸುವುದರಿಂದ ನಿವಾರಿಸಬಹುದು ಎಂದು ವಿವರಿಸಿದರು.

ಅಕ್ಕಮಹಾದೇವಿ ಮಹಿಳಾಸಂಘದ ಅಧ್ಯಕ್ಷೆ ಆಶಾ ಮಲ್ಲೇಶ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಣ್ಣಪುಟ್ಟ ಕಾಯಿಲೆಗಳಿಗೂ ಔಷಧ ಅಂಗಡಿಗಳಿಗೆ ಹೋಗಿ ಸಾಕಷ್ಟು ಹಣ ವ್ಯಯಿಸಿ ಅಷ್ಟಿಷ್ಟು ಆರೋಗ್ಯಕ್ಕೂ ಧಕ್ಕೆ ತಂದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮನೆಯಮದ್ದು ಬಳಕೆಯಿಂದ ಪ್ರಯೋಜನ ಪಡೆಯಬಹುದು. ಮಹಿಳೆಯರ ಅನೇಕ ಸಮಸ್ಯೆಗಳಿಗೂ ಪಡಸಾಲೆಯಲ್ಲೆ ಪರಿಹಾರ ಸುಲಭವಾಗಿ ಕಂಡುಕೊಳ್ಳುವAತಾಗಲು ಇಂದಿನ ಕಾರ್ಯಾಗಾರ ಸಹಕಾರಿಯಾಗಿದೆ ಎಂದರು.

ಆರೋಗ್ಯಭಾರತಿ ಸಂಯೋಜಕ ಶಿವಮೊಗ್ಗದ ಡಾ.ಶ್ರೀಧರ್ ಮತ್ತು ಜಿಲ್ಲಾಧ್ಯಕ್ಷ ಡಾ.ಶಿವರಾಜ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಆಶಾ ಹೇಮಂತ್, ಸಹಕಾರ್ಯದರ್ಶಿ ಮಧುಮತಿ ಶಿವಕುಮಾರ್ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net