

ಕಲಬುರಗಿ: ವಿಧಾನ ಪರಿಷತ್ ಸದಸ್ಯ, ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಶಶೀಲ ನಮೋಶಿ ಹಾಗೂ ಇತರರ ವಿರುದ್ಧ ಎಚ್‌ಕೆಇ ಸಂಸ್ಥೆ ಮೆಡಿಕಲ್ ಕಾಲೇಜಿನ ಸ್ಟೆಫಂಡ್‌ಗೆ ಸಂಬAಧಿಸಿದAತೆ ದಾಖಲಾಗಿದ್ದ ಎಲ್ಲ ಕೇಸ್ ವಜಾ ಮಾಡಿ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಎಚ್‌ಕೆಇ ಅಧ್ಯಕ್ಷ, ಎಂಎಲ್ಸಿ ಶಶೀಲ್ ನಮೋಶಿ, ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಡಾ.ಮಲ್ಲಿಕಾರ್ಜುನ ಭಂಡಾರ, ಡಾ.ಸಾಯಿನಾಥ, ಡಾ.ಶರಣಬಸಪ್ಪ ಹರವಾಳ ವಿರುದ್ಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ವಕೀಲ ಪ್ರದೀಪ್ ದಾಬಶೆಟ್ಟಿ ದೂರು ದಾಖಲಿಸಿದ್ದರು. ೨೦೦೯ರಿಂದ ೨೦೧೮ರ ವರೆಗೆ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜಿನಲ್ಲಿ ಸ್ಟೆÊÀಂಡ್ ಅಕ್ರಮ ಮಾಡಿದ್ದಾರೆ ಎಂದು ೨೦೨೪ರ ಆ.೫ರಂದು ಎïಐಆರ್ ದಾಖಲಾಗಿತ್ತು. ನಂತರ ಹಳೇ ದಾಖಲೆ ಸುಟ್ಟು, ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾರೆಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದರು. ಎರಡು ಎïಐಆರ್ ರದ್ದು ಮಾಡುವಂತೆ ಕೋರಿ ಹೈ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಎಲ್ಲ ಎïಐಆರ್‌ಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.