

ಯಾದಗಿರಿ: ಸ್ಕಾಡಾ ತಂತ್ರಜ್ಞಾನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲು ಜ.19 ರಂದು ಜಿಲ್ಲೆಯ ಕೊಡೆಕಲ್ ಗ್ರಾಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವ ಕಾರಣ ಹುಣಸಗಿ-ನಾರಾಯಣಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಜಿಲ್ಲಾಡಳಿತದಿಂದ ಬೃಹತ್ ವೇದಿಕೆ ಸಜ್ಜುಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ.
ಈ ಹಿನ್ನಲೆ ಜಿಲ್ಲಾಡಳಿತದ ಅಕಾರಿಗಳೊಂದಿಗೆ ಸೋಮವಾರ ವಿಶೇಷ ಭದ್ರತಾ ಪಡೆಯ ತಂಡದವರು ಚಚರ್ೆ ನಡೆಸಿದರು. ಪ್ರಧಾನಿಗಳು ಭಾಗವಹಿಸುವಲ್ಲಿ ಹೊಸ ತಂತ್ರಜ್ಞಾನದ ಪೆಂಡಾಲ್ ಹಾಗೂ ವೇದಿಕೆ ನಿಮರ್ಿಸುತ್ತಿದ್ದು ಗಣ್ಯರು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೆ ಸೂಕ್ತ ಸೌಲಭ್ಯ ಸುರಕ್ಷೆ, ಊಟ, ಉಪಹಾರ ಪಾಕಿರ್ಂಗ್ ಹಾಗೂ ಇನ್ನಿತರ ಮೂಲ ಸೌಕರ್ಯ ವ್ಯವಸ್ಥೆಯನ್ನು ಎಲ್ಲಾ ಇಲಾಖೆಗಳ ಮಧ್ಯೆ ಸಮನ್ವಯ ಮೂಲಕ ಸಿದ್ಧತೆ ನಡೆಸಲಾಗುತ್ತಿದೆ.
ಪ್ರಧಾನಿ ಮೋದಿ ಅವರಿಗೆ ಎಸ್ಪಿಜಿ ಭದ್ರತೆ ಇರುವ ಕಾರಣ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಯಾವುದೇ ಆಕ್ಷೇಪಾರ್ಹ ವಸ್ತುಗಳು ಬರದಂತೆ ನೋಡಿಕೊಂಡು, ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗುತ್ತದೆ. ಪ್ರಧಾನಿಗಳ ಸುರಕ್ಷಿತ ಮತ್ತು ಸುಲಲಿತ ಸಂಚಾರ, ಪ್ರತಿಯೊಬ್ಬ ಸಾರ್ವಜನಿಕರಿಗೂ ಅತೀ ಹತ್ತಿರದಿಂದ ವಾಹನದಿಂದ ಇಳಿದು ಸಭಾ ಕಾರ್ಯಕ್ರಮಕ್ಕೆ ಬರಲು ಅವಕಾಶ, ಕಾರ್ಯಕ್ರಮ ಮುಗಿದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪುವ ಹಿನ್ನೆಲೆಯಲ್ಲಿ ಸಂಚಾರ ನಿಷೆೇಧ, ಸಂಚಾರ ಬದಲಾವಣೆ, ಪಾಕಿರ್ಂಗ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಒಟ್ಟು 6 ಹೆಲಿಪ್ಯಾಡ್ಗಳನ್ನು ನಿಮರ್ಿಸಲಾಗುತ್ತಿದೆ. ಸಾರ್ವಜನಿಕರಿಗಾಗಿ ಮೊಬೈಲ್ ಶೌಚಗೃಹ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ತಿಳಿಸಿದರು
ಶಾಸಕ ನರಸಿಂಹ ನಾಯಕ (ರಾಜುಗೌಡ), ಜಿಪಂ ಸಿಇಒ ಅಮರೇಶ.ಆರ್ ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂತರ್ಿ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ತಹಸೀಲ್ದಾರ ಜಗದೀಶ ಚೌರ್, ಡಿಎಚ್ಓ ಡಾ.ಗುರುರಾಜ ಹಿರೇಗೌಡ ಇದ್ದರು.