ನಮಸ್ತೆ ಸ್ಕೀಮ್ ಅಡಿ ಪಿಪಿಇ ಕಿಟ್ ವಿತರಣೆ

2 ckm 1
ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಪೌರಕಾರ್ಮಿಕರಿಗೆ ಕೇಂದ್ರ ಸರ್ಕಾರದ ನಮಸ್ತೆ ಸ್ಕೀಮ್ ಅಡಿ ಪಿಪಿಇ ಕಿಟ್ ವಿತರಣೆ ಮಾಡಿದರು. ಬಿ.ಸಿ.ಬಸವರಾಜ್, ಲಲಿತಾ ರಾಜಾನಾಯ್ಕ, ರವಿ, ವೆಂಕಟೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಮಸ್ತೆ ಸ್ಕೀಮ್ ಅಡಿ ಕೇಂದ್ರ ಸರ್ಕಾರ ಪೌರಕಾರ್ಮಿಕರ ಸುರಕ್ಷತೆಗಾಗಿ ೩೨ ಪಿಪಿಇ ಕಿಟ್ ಗಳನ್ನು ಕಳುಹಿಸಿದ್ದು, ಪ್ರತಿಯೊಬ್ಬ ಪೌರ ಕಾರ್ಮಿಕರು ಈ ಕಿಟ್ ಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.

ನಗರದ ನಗರಸಭೆ ಸಭಾಂಗದಲ್ಲಿ ಗುರುವಾರ ನಗರಸಭೆಯಿಂದ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಒಳಚರಂಡಿ ಕಾರ್ಮಿಕರಿಗೆ ಸಮವಸ್ತö್ರ ಹಾಗೂ ಸುರಕ್ಷಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನುz್ದೆÃಶಿಸಿ ಮಾತನಾಡಿ, ಕೇಂದ್ರ ಸರ್ಕಾರದಿಂದ ೩೨ ಕಿಟ್ ಗಳು ಬಂದಿವೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ನೀಡಿರುವ ಕಿಟ್ ನಲ್ಲಿ ಗಮ್ ಶೂಗಳು, ಹೆಲ್ಮೆಟ್, ಕನ್ನಡಕ, ಮಾಸ್ಕ್, ಗ್ಲೌಸ್, ಡ್ರೆಸ್ ಗಳಿವೆ. ಒಳಚರಂಡಿ ಸ್ವಚ್ಛತಾ ಕಾರ್ಯದ ವೇಳೆ ಕಾರ್ಮಿಕರು ಈ ಸುರಕ್ಷತಾ ಸಾಮಗ್ರಿಗಳನ್ನು ಧರಿಸಬೇಕು. ಈಗಾಗಲೇ ನಗರಸಭೆಯಿಂದ ಪೌರಕಾರ್ಮಿಕರಿಗೆ ಸುರಕ್ಷಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ. ಇದೀಗ ಕೇಂದ್ರ ಸರ್ಕಾರದಿಂದ ಬಂದಿರುವ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಇವುಗಳನ್ನು ಬಳಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದಲ್ಲಿ ಅನಾರೋಗ್ಯದಿಂದ ದೂರವಿರಲು ಸಾಧ್ಯವಾಗಲಿದೆ ಎಂದರು.

ಯಾವೊಬ್ಬ ಪೌರ ಕಾರ್ಮಿಕರು ಮ್ಯಾನ್ ಹೋಲ್ ಗಳಲ್ಲಿ ಇಳಿದು ಸ್ವಚ್ಛತಾ ಕಾರ್ಯ ಕೈಗೊಳ್ಳಬಾರದು. ಇದಕ್ಕಾಗಿ ಈಗಾಗಲೇ ನಗರಸಭೆಯಿಂದ ರಾಡಿಂಗ್ ಮಷೀನ್, ಡೀಸೆಟ್ಟಿಂಗ್ ಮಷಿನ್ ಖರೀದಿಸಲಾಗಿದೆ. ಇವುಗಳ ಜೊತೆಗೆ ಈಗಾಗಲೇ ನಗರಸಭೆಯಲ್ಲಿ ಇರುವ ಸಕ್ಕಿಂಗ್ ಮಷೀನ್ ಬಳಸಿಕೊಂಡು ಮ್ಯಾನ್ ಹೋಲ್ ಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದ ನಗರಸಭಾಧ್ಯಕ್ಷೆ ಶೀಲಾ ದಿನೇಶ್, ಪೌರಕಾರ್ಮಿಕರು ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು. ಪೌರಕಾರ್ಮಿಕರು ಆರೋಗ್ಯದಿಂದ ಇದ್ದಾಗ ಮಾತ್ರ ನಗರ ಸ್ವಚ್ಛವಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಕೇಂದ್ರ ಸರ್ಕಾರದಿಂದ ನೀಡಿರುವ ಕಿಟ್ ಗಳನ್ನು ಕಡ್ಡಾಯವಾಗಿ ಸ್ವಚ್ಛತಾ ಕಾರ್ಯದ ವೇಳೆ ಧರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಗರ ಸಭೆ ಉಪಾಧ್ಯಕ್ಷ ಲಲಿತಾ ರಾಜನಾಯ್ಕ, ಮ್ಯಾನೇಜರ್ ರವಿ, ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಸುನಿಲ್, ನಾಗಪ್ಪ, ರಂಗಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net