ನನ್ನ ಸೋಲಿಗೆ ಸ್ವ ಪಕ್ಷದ ಮುಖಂಡರೇ ಕಾರಣ: ದೇವರಾಜೇಗೌಡ

ನನ್ನ ಸೋಲಿಗೆ ಸ್ವ ಪಕ್ಷದ ಮುಖಂಡರೇ ಕಾರಣ: ದೇವರಾಜೇಗೌಡ
Published on

ಹಾಸನ: ಈ ಬಾರಿ ಚುನಾವಣೆಯಲ್ಲಿ ನನ್ನ ಸೋಲಿಗೆ ಸ್ವ ಪಕ್ಷದ ಮುಖಂಡರೇ ಕಾರಣ ಎಂದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ನನ್ನ ಜತೆ ಇದ್ದು, ನನ್ನ ವಾಹನ ಮತ್ತು ಹಣ ಬಳಸಿಕೊಂಡು ನಮ್ಮ ಪಕ್ಷದ ಮುಖಂಡರೇ ನನಗೆ ಮೋಸ ಮಾಡಿದ್ದಾರೆ, ಮತದಾರರಿಗೆ ತಪ್ಪು ಮಾಹಿತಿ ನೀಡಿದ್ದ ಫಲವಾಗಿ ತಾನು ಸೋತ್ತಿದ್ದೇನೆ ಎಂದರು

ಬಿಜೆಪಿ ಅಭ್ಯರ್ಥಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಸ್ವ ಪಕ್ಷದ ಕಾರ್ಯಕರ್ತರು ಮುಂದಾಗಿರುವ ಬಗ್ಗೆ ಎಲ್ಲಾ ದಾಖಲೆಗಳು ಲಭ್ಯವಿದ್ದು, ಈ ಬಗ್ಗೆ ಬಿಜೆಪಿ ಹೈ ಕಮಾಂಡ್‌ಗೆ ದೂರು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ ಎಂದು ಹೇಳಿದರು.

ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದು, ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸತತ ಪರಿಶ್ರಮ ಪಟ್ಟು ಚುನಾವಣೆ ಎದುರಿಸಿದ್ದೇನೆ, ಆದರೆ ನನ್ನ ಮತ್ತು ಬಿಜೆಪಿ ಪಕ್ಷದ ನಡುವೆ ಇದ್ದಕೊಂಡಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು

ಸುದ್ದಿಗೋಷ್ಠಿಯಲ್ಲಿ ಶಾಂತಿಗ್ರಾಮ ಮಂಡಲದ ಕಾರ್ಯದರ್ಶಿ ನವೀನ್,ಉಪಾಧ್ಯಾಕ್ಷ ರಂಗಸ್ವಾಮಿ,ಜವರೇಗೌಡ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net