

ಚಿತ್ರದುರ್ಗ:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನರಲ್ಲಿ ಕಡ್ಡಾಯ ಮತದಾನದೆಡೆ ಜಾಗೃತಿ ಮೂಡಿಸಲು ಚಿತ್ರದುರ್ಗ ತಾಲೂಕು ಸ್ವೀಪ್ ಸಮಿತಿಯಿಂದ ಹಿರೇಗುಂಟನೂರಲ್ಲಿ ಗುರುವಾರ ಹೋಬಳಿ ಮಟ್ಟದ ಎತ್ತಿನ ಬಂಡಿ ಮೆರವಣಿಗೆ ಏರ್ಪಡಿಸಿತ್ತು. ನನ್ನ ಮತ ನನ್ನ ಹಕ್ಕು ಎಂಬ ಮತದಾನದ ಮಹತ್ವವನ್ನು ಸಾರುವ ಬಣ್ಣ,ಬಣ್ಣದ ರಂಗೋಲಿಗಳ ಚಿತ್ತಾರಗಳು ಗಮನ ಸೆಳೆದವು.ಗ್ರಾಮಸ್ಥರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಚಿತ್ರದುರ್ಗ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್.ಅನಂತರಾಜು,ಪಿಆರ್‌ಇಡಿ ಇಇ ಪಾತಪ್ಪ, ಪಿಡಿಒಗಳಾದ ಸಿ.ಎಲ್. ಬಸವ ರಾಜಪ್ಪ,ಲಾಲ್ಯಾನಾಯ್ಕಾ,ಬಸಪ್ಪ, ವನಜಾಕ್ಷಿ,ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು,ಸ್ವಸಹಾಯ ಸಂಘಗಳು ಸದಸ್ಯರು ಮತ್ತಿತರರು ಇದ್ದರು.