

ಯಾದಗಿರಿ: ವಿಧಾನಸಭಾ ಚುನಾವಣೆಯಲ್ಲಿ ನಾನು ಆಯ್ಕೆಯಾಗುವಲ್ಲಿ ಕ್ಷೇತ್ರದ ಯುವಕರ ಪಾತ್ರ ಹೆಚ್ಚಿದ್ದು, ಅವರ ಋಣ ಎಂದಿಗೂ ತೀರಿಸಲಾರೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಮಂಗಳವಾರ ಗುರುಮಠಕಲ್ ಕ್ಷೇತ್ರದ ಯರಗೋಳ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೂತನವಾಗಿ ನಿಮರ್ಿಸಿದ ನಿಜಶರಣ ಅಂಬಿಗರ ಚೌಡಯ್ಯ ಭವನ ಲೋಕಾರ್ಪಣೆ, 70 ಕೋಟಿ ರೂ.ವೆಚ್ಛದಲ್ಲಿ ಸನ್ನತಿ ಬ್ಯಾರೇಜ್ನಿಂದ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ, ಬಾಗಿನ ಅಪರ್ಿಸಿ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ನಾನು ರಾಜಕೀಯ ಮಾಡುತ್ತೇನೆ, ಅಭಿವೃದ್ಧಿ ವಿಷಯಕ್ಕಲ್ಲ. ಈ ಗ್ರಾಮ ನನಗೆ ರಾಜಕೀಯ ಜೀವನ ಕಲ್ಪಿಸಿದೆ ಎಂದರು.
ಗ್ರಾಮದಲ್ಲಿ ಚೌಡಯ್ಯ ಸಮುದಾಯ ಭವನ ನಿಮರ್ಾಣಕ್ಕೆ 2013ರಲ್ಲೇ ಅನುದಾನ ಬಂದಿತ್ತು. ಆದರೆ ಅಕಾರಿಗಳು ಹಣ ದುರ್ಬಳಕೆ ಮಾಡಿಕೊಂಡ ಪರಿಣಾಮ 10 ವರ್ಷ ವಿಳಂಬವಾಯಿತು. ಈ ಹಿಂದಿನ ಶಾಸಕ ನಾಗನಗೌಡ ಕಂದಕೂರ ಅವರು ಸತತ ಪ್ರಯತ್ನ ಮಾಡಿ ಭವನ ನಿಮರ್ಾಣಕ್ಕೆ ಕಾರಣರಾಗಿದ್ದಾರೆ. ಅದರಂತೆ 6 ಕೆರೆಗಳಿಗೆ ನೀರು ತುಂಬಿಸುವುದರಿಂದ ಈ ಭಾಗದ 1700 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ವಿವರಿಸಿದರು.
ನಮ್ಮ ತಂದೆ ಶಾಸಕರಾಗಿದ್ದಾಗ ಕ್ಷೇತ್ರದ ಗುಡಿ, ಗುಂಡಾರಗಳಿಗೆ ಸಾಕಷ್ಟು ಅನುದಾನ ನೀಡಿದ್ದು, ಈಗಲೂ ದೇವಸ್ಥಾನಕ್ಕೆ ಹಣ ಕೇಳಬೇಡಿ. ಈ ಬಾರಿ ನಾನು ಶಾಸಕರ ಅನುದಾನವನ್ನು ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಲಭ್ಯಕ್ಕಾಗಿ ಮೀಸಲಿಡುತ್ತಿದ್ದೇನೆ. ಹಿರಿಯರ ಮಾರ್ಗದರ್ಶನದಿಂದ ಗುರುಮಠಕಲ್ ಸಮಗ್ರ ಅಭಿವೃದ್ಧಿಯ ಸಂಕಲ್ಪ ಮಾಡಿದ್ದೇನೆ. ಅಲ್ಲದೆ, ಬರುವ ದಿನಗಳಲ್ಲಿ ಯರಗೋಳ ಮತ್ತು ಸೈದಾಪುರ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದಜರ್ೆಗೇರಿಸಲು ಪ್ರಯತ್ನಿಸುವುದಾಗಿ ವಾಗ್ದಾನ ಮಾಡಿದರು.
ಗ್ರಾಪಂ ಅಧ್ಯಕ್ಷ ರಾಮಣ್ಣ ಅಲ್ಲಿಪುರ, ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ಅಕಾರಿ ಸಂತೋಷರೆಡ್ಡಿ, ವಸತಿ ನಿಲಯದ ಮೇಲ್ವಿಚಾರಕ ಚೆನ್ನಪ್ಪ ಗೌಡ, ಅಂಗನವಾಡಿ ಮೇಲ್ವಿಚಾರಕಿ ರೇಣುಕಾ, ವೈದ್ಯಾಕಾರಿ ಡಾ. ಜಗದೀಶ ಪಾಟೀಲ್, ಪಿಡಿಒ ಕಲ್ಯಾಣಕುಮಾರ, ಪ್ರಮುಖರಾದ ಮಾಕರ್ಂಡಪ್ಪ ಮನೆಗಾರ, ಹನುಮಂತ ತಳವಾರ್, ವಿಜಯಕುಮಾರ್ ದಿಬ್ಬಾ, ಆಜೀಮಿಯಾ, ರಾಮಣ್ಣ ಕೊಟ್ರಕಿ, ವಾಚು, ಮೂತರ್ಿ ಚಿಕ್ಕಮಠ, ಪ್ರಭು ಅರಿಕೇರಾ ಇದ್ದರು.