

ರಟ್ಟಿಹಳ್ಳಿ: ತಾಲೂಕಿನ ಬೈರಂಪಾದ ಬಳಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಭರತ ರಾಜಕುಮಾರ ಪ್ರಜಾಪತ (21) ಮೃತ ಯುವಕ. ಮೂಲತಃ ರಾಜಸ್ತಾನದ ಬಿಲ್ಲಾರ ಪಟ್ಟಣದ ನಿವಾಸಿಯಾಗಿದ್ದ ಯುವಕ 3 ವರ್ಷಗಳಿಂದ ಪಟ್ಟಣದ ಕಾವೇರಿ ಜ್ಯುವೆಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬುಧವಾರ ಹೋಳಿ ಹಬ್ಬದ ನಂತರ ಸ್ನಾನ ಮಾಡಲು ನದಿಗೆ ತೆರಳಿದ್ದ ವೇಳೆ ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿದ್ದಾನೆ. ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.